ಬೆಂಗಳೂರು: ಬಾರ್ನಲ್ಲಿ ನಡೆದ ಸಣ್ಣ ಜಗಳದಿಂದಾಗಿ ಯುವಕನೊಬ್ಬನನ್ನು ಕೆಲವು ಯುವಕರ ತಂಡವೊಂದು ಅಟ್ಟಾಡಿಸಿ ಲಾಂಗ್ ನಿಂದ ಹಲ್ಲೆ ನಡೆಸಿದ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಅವಾಜ್ ಹಾಕಿದ್ದಕ್ಕೆ ರೋಹಿತ್ ಗೌಡ ಎಂಬಾತನ ಮೇಲೆ ಕಾಮಾಕ್ಷಿಪಾಳ್ಯದ ರಾಜು ಮತ್ತು ತಂಡದವರು ನಡುರಸ್ತೆಯಲ್ಲಿ ಲಾಂಗ್ ಬೀಸುತ್ತಾ ಹಲ್ಲೆ ಮಾಡಿದ್ದಾರೆ.
ಹಲ್ಲೆ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ವಾರ ರೋಹಿತ್ ಬಾರ್ವೊಂದರಲ್ಲಿ ಇದ್ದಾಗ ರಾಜು, ಧನುಷ್, ಗುರುಪ್ರಸಾದ್ಗೆ ಅವಾಜ್ ಹಾಕಿ ಹೋಗಿದ್ದ. ಇದರಿಂದ ಈ ಮೂವರು ಮನಸ್ಸಿನಲ್ಲೆ ದ್ವೇಷ ಕಾರುತ್ತಿದ್ದರು. ರೋಹಿತ್ ನನ್ನು ಹೀಗೆ ಬಿಟ್ಟರೇ ನಮ್ಮನ್ನೇ ಮುಗಿಬಿಡುತ್ತಾನೆ ಎಂದುಕೊಂಡು ಆತನ ಹತ್ಯೆಗೆ ಸ್ಕೆಚ್ ಹಾಕಿದರು. ಕಳೆದ ಸೆ. 9ರ ಮಧ್ಯಾಹ್ನದಂದು ಸ್ನೇಹಿತರ ಜತೆ ಬರುತ್ತಿದ್ದ ರೋಹಿತ್ ನನ್ನು ಕಂಡೊಡನೆ ಸ್ಕೂಟರ್ ನಿಂದ ಇಳಿದ ರಾಜು, ಧನುಷ್ , ಗುರುಪ್ರಸಾದ್ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾರೆ. ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇವಾಲಯದ ಮುಂದೆಯೇ ಅಟ್ಯಾಕ್ ಮಾಡಿ ಮನಬಂದಂತೆ ಲಾಂಗ್ ಬೀಸಿದ್ದಾರೆ.
ಏರಿಯಾ ಪೂರ್ತಿ ಓಡಾಡಿಸಿ ಮಚ್ಚು, ಲಾಂಗ್ನಿಂದ ಹಲ್ಲೆ ಮಾಡಿ, ಮತ್ತೆ ಬಾರ್ ಸೇರಿದ್ದಾರೆ. ಇತ್ತ ಗಾಯಾಳು ರೋಹಿತ್ ಬೆನ್ನು ಮೂಳೆ ಕಟ್ ಆಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಮುಂದುವರಿದದಿದೆ. ಕಾಮಾಕ್ಷಿಪಾಳ್ಯ ಸಬ್ ಇನ್ಸ್ಪೆಕ್ಟರ್ ಬಿ.ರಾಣಿ ಮತ್ತು ತಂಡ ಸೇರಿ ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ.