ರಾಜ್ಯದಂತ 10ನೇ ತರಗತಿ ವಾರ್ಷಿಕ ಪರಿಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿ ಗಳಲ್ಲಿ ಭಯ ಶುರುವಾಗಿದೆ ಅದರಂತೆ ಇಂದು ವಿಜಯಪುರ ಜಿಲ್ಲೆಯ ಕುಮಟಗಿ, ಕಗ್ಗೋಡ ತಾಂಡಾದ 10ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಕಗ್ಗೋಡು ಪ್ರೌಢಶಾಲಾ ಕೇಂದ್ರಕ್ಕೆ ಆಗಮಿಸುತ್ತಿದ್ದ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ ದುರ್ಘಟನೆ ಅಪಘಾತದಲ್ಲಿ ಮೂವರು ಪರೀಕ್ಷಾರ್ಥಿ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ. ವಿಜಯಪುರ ನಗರದ ಬಿ ಎಲ್ ಡಿ ಇ ಆಸ್ಪತ್ರೆಗೆ ಗಾಯಾಳು ರವಾನಿಸಲಾಗಿದೆ.
ಬೈಕ್ ನಲ್ಲಿದ್ದ ವೆಂಕು ಚವ್ಹಾಣ (43) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಮೃತ ಯೆಂಕು ಚವ್ಹಾಣ ಪುತ್ರಿಯರಾದ ಐಶ್ವರ್ಯ, ಪ್ರೀತಿ ಹಾಗೂ ಪಕ್ಕದ ಮನೆ ನಿವಾಸಿಯಾಗಿದ್ದಾರೆ. ಶ್ವೇತಾ ರಾಠೋಡ್ ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ಬಳಿ ಎನ್ ಎಚ್ 52 ರಲ್ಲಿ ನಡೆದಿದೆ.
ವಿಷಯ ತಿಳಿದ ತಕ್ಷಣ ನಗರದ ಉಸ್ತುವಾರಿ ಸಚಿವ M B ಪಾಟೀಲ್ ಆಸ್ಪತ್ರೆಗೆ ಆಗಮಿಸಿ ಭೇಟಿಯಾಗಿ ಧೈರ್ಯ ತುಂಬಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದೆ. ವಿದ್ಯಾರ್ಥಿಗಳು ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ಉಚಿತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

