ಮೈಸೂರು : ಮೈಸೂರಿನಲ್ಲಿ ಬೈಕ್- ಗೂಡ್ಸ್ ವ್ಯಾನ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರರು ಸುಮಾರು 10 ಅಡಿ ದೂರ ಹಾರಿ ಬಿದ್ದಿದ್ದಾರೆ.
ಬೈಕ್ನಲ್ಲಿ ತ್ರಿಬಲ್ ರೈಡ್ ಬರುತ್ತಿದ್ದರು. ಸ್ಥಳದಲ್ಲೇ ಒಬ್ಬ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೈಸೂರಿನ ಲಿಂಗದೇವರು ಕೊಪ್ಪಲಿನಲ್ಲಿ ಘಟನೆ ನಡೆದಿದೆ. 30 ವರ್ಷದ ಸ್ವಾಮಿ ಮೃತ ವ್ಯಕ್ತಿ, ಮಂಜು, ಕುಮಾರ್ಗೆ ಗಾಯಗಳಾಗಿದೆ. ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದೊಡ್ಡಮಾರಗೌಡನಹಳ್ಳಿ ನಿವಾಸಿಗಳು ಬೈಕ್ನಲ್ಲಿ ಬರ್ತಾ ಇದ್ರು, ಅಪಘಾತದ ಬಳಿಕ ಮಿನಿ ಗೂಡ್ಸ್ ವಾಹನ ಡ್ರೈವರ್ ಪರಾರಿಯಾಗಿದ್ದಾನೆ. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.