ಬೆಳಗಾವಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ನಡೆದಿದೆ.
ಮೃತನನ್ನು ಸಂಗರಗಾಳಿ ಗ್ರಾಮದ ನಾರಾಯಣ ಲಕ್ಷ್ಮೀಣ ಕಡೋಲ್ಕರ್ (65) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ನಾಲ್ವರ ಗುರುತು ಪತ್ತೆಯಾಗಿಲ್ಲ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾನಾಪೂರ ತಾಲೂಕಿನ ನಾಯ್ಕಲ್ ಕತ್ರಿ ರಸ್ತೆ ಬಳಿ ಹತ್ತು ಚಕ್ರದ ಲಾರಿ ನಿಂತಿತ್ತು. ಈ ಲಾರಿಗೆ ಮಾಡಿಗುಂಜಿ ಕಡೆಯಿಂದ ಖಾನಾಪುರ ಕಡೆಗೆ ಬರುತ್ತಿದ್ದ ಮಿನಿ ಟ್ರಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.