ಸುಳ್ಯ: ಪತಿ ಮನೆಯಲ್ಲಿ ಜಗಳ ಮಾಡುತ್ತಾನೆಂಬ ಕಾರಣಕ್ಕೆ ಮಹಿಳೆಯೊಬ್ಬರು ಕೋಪಗೊಂಡು ನದಿಗೆ ಹಾರಲೆಂದು ಸುಳ್ಯ ಸಮೀಪದ ಕಾಂತಮಂಗಲ ಸೇತುವೆ ಬಳಿ ಬಂದು ಅಳುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಗೆ ಬುದ್ದಿವಾದ ಹೇಳಿದ ಘಟನೆ ಗುರುವಾರ ಸುಳ್ಯದಲ್ಲಿ ನಡೆದಿದೆ.
- ದಂಪತಿ ನಡುವೆ ಜಗಳ
ಕಾಂತಮಂಗದ ಬಾಡಿಗೆ ಕೊಠಡಿಯಲ್ಲಿರುವ ಪತಿ-ಪತ್ನಿ ಮಧ್ಯೆ ಜಗಳವಾಗಿತ್ತು. ಪತಿಯ ಮೇಲೆ ಸಿಟ್ಟಾದ ಪತ್ನಿ ಕಾಂತಮಂಗಲದ ಪಯಸ್ವಿನಿ ನದಿ ಬದಿಗೆ ಬಂದು ಕುಳಿತು ಅಳುತ್ತಿದ್ದ ವೇಳೆ ಸ್ಥಳೀಯರು ಆ ಮಹಿಳೆಯನ್ನು ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಸ್ಥಳೀಯರು ತತ್ಕ್ಷಣ ಪೋಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಗೆ ಬುದ್ಧಿವಾದ ಹೇಳಿ ಠಾಣೆಗೆ ಕರೆದೊಯ್ದರು.