ದಾವಣಗೆರೆ : 79 ವರ್ಷದ ಚಿದಾನಂದಪ್ಪ ಎನ್ನುವ ಮುದುಕನನ್ನು 32 ವರ್ಷದ ಯಶೋಧ ಎನ್ನುವ ಮಹಿಳೆ ಹನಿ ಟ್ರ್ಯಾಪ್ ಗೆ ಒಳಗಾಗಿಸಿದ ಘಟನೆ ಈಗ ಬೆಳಕಿಗೆ ಬಂದಿದೆ.
ಚಿದಾನಂದಪ್ಪ ಅವರ ಜೊತೆಗೆ ಯಶೋಧ ಚೆನ್ನಾಗಿಯೇ ಮಾತನಾಡಿಕೊಂಡು ಅವರ ಮನೆಗೆ ಚಾ ಜ್ಯೂಸ್ ಕಾಫಿ ನೀಡಿ ಬರುತ್ತಿದ್ದಳು. ನಂತರ ತನಗೆ ಬೇಕಾದಾಗಲೆಲ್ಲ ಆತನ ಬಳಿಗೆ ಹೋಗಿ 5000 10000 ಹೀಗೆ ಹಣವನ್ನು ತೆಗೆದುಕೊಂಡು ಬರುತ್ತಿದ್ದಳು.
ಒಂದು ಸಮಯದಲ್ಲಂತೂ ಚಿದಾನಂದಪ್ಪ ಅವರ ಬಳಿ ಬರೋಬ್ಬರಿ 86,000 ಸಾಲವನ್ನು ಯಶೋದ ಪಡೆದುಕೊಳ್ಳುತ್ತಾಳೆ. ಒಂದು ಸಮಯ ದಲ್ಲಿ ಚಿದಾನಂದಪ್ಪ ಅವರು ತಮ್ಮ ಕೆಲಸದಿಂದ ನಿವೃತ್ತಿಯನ್ನು ಪಡೆದುಕೊಂಡ ಮೇಲೆ ಯಶೋದ ಬಳಿ ತಮ್ಮ ಬಳಿ ಸಾಲವಾಗಿ ಪಡೆದುಕೊಂಡಿದ್ದ ಹಣವನ್ನು ವಾಪಸು ನೀಡುವಂತೆ ಕೇಳಿಕೊಳ್ಳುತ್ತಾರೆ. ಒಂದು ದಿನ ಚಿದಾನಂದಪ್ಪ ಅವರನ್ನು ಪ್ರೀತಿಯಿಂದ ಮನೆಗೆ ಕರೆದು ಜ್ಯೂಸ್ ಅನ್ನು ಯಶೋಧ ನೀಡಿದ್ದಾಳೆ. ಜ್ಯೂಸ್ ಕುಡಿದ ಮೇಲೆ ಚಿದಾನಂದಪ್ಪ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿದ್ದಾರೆ. ನಂತರ ಎದ್ದು ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು.
ಹೌದು ಎದ್ದು ನೋಡಿದಾಗ ಚಿದಾನಂದಪ್ಪ ಅವರ ಮೈಮೇಲೆ ಬಟ್ಟೆನೇ ಇರಲಿಲ್ಲ. ನಂತರ ಕೂಡಲೇ ಬಟ್ಟೆ ಹಾಕಿಕೊಂಡು ಚಿದಾನಂದಪ್ಪ ತಮ್ಮ ಮನೆಗೆ ಓಡಿ ಹೋಗುತ್ತಾರೆ. ಎರಡು ದಿನಗಳ ನಂತರ ಯಶೋಧ ಚಿದಾನಂದಪ್ಪ ಅವರಿಗೆ ಫೋನ್ ಮಾಡಿ ನಿನ್ನ ವಿಡಿಯೋ ನನ್ನ ಬಳಿ ಇದೆ ಎಂಬುದಾಗಿ ಬ್ಲಾಕ್ಮೇಲ್ ಮಾಡುತ್ತಾಳೆ. ಕೂಡಲೆ 15 ಲಕ್ಷ ರೂಪಾಯಿ ನೀಡಿದಿದ್ದರೆ ಈ ವಿಡಿಯೋವನ್ನು ಹೆಂಡತಿ ಮಕ್ಕಳಿಗೆ ತೋರಿಸುತ್ತೇನೆ ಎಂಬುದಾಗಿ ಯಶೋಧ ಹೇಳುತ್ತಾಳೆ. ಆಗ ದಿಗಿಲುಗೊಂಡ ಚಿದಾನಂದಪ್ಪ ಏಳರಿಂದ ಎಂಟು ಲಕ್ಷದ ಡೀಲ್ ಮುಗಿಸಲು ಯಶೋದಾಗಿ ಕೇಳುತ್ತಾರೆ ಆದರೆ ಆಕೆ 15 ಲಕ್ಷ ರೂಪಾಯಿ ಹಣ ಬೇಕೇ ಬೇಕು ಎಂಬುದಾಗಿ ಹೇಳುತ್ತಾಳೆ.
ಇದಾದ ನಂತರ ಕೂಡಲೇ ಚಿದಾನಂದಪ್ಪ ಅವರ ವಾಟ್ಸಪ್ ಗೆ ತಾವಿಬ್ಬರು ಬಟ್ಟೆ ಇಲ್ಲದೆ ಇರುವಂತಹ ಫೋಟೋವನ್ನು ಅವಳ ಮುಖವನ್ನು ಮರೆಮಾಚಿ ಚಿದಾನಂದಪ್ಪ ಅವರಿಗೆ ಕಳಿಸುತ್ತಾಳೆ. ದಿಕ್ಕು ತೋಚದೆ ಚಿದಾನಂದಪ್ಪ ಕೊನೆಯ ದಾರಿ ಇಲ್ಲ ಎನ್ನುವಂತೆ ತನ್ನ ಮಗನಿಗೆ ಹೇಳಿಬಿಡುತ್ತಾರೆ. ಕೂಡಲೆ ಚಿದಾನಂದಪ್ಪ ಅವರ ಮಗ ಪೊಲೀಸರಿಗೆ ದೂರನ್ನು ನೀಡಿ ಕೂಡಲೇ ಪೊಲೀಸರು ಯಶೋಧಾಳನ್ನು ಬಂಧಿಸುತ್ತಾರೆ. 15 ಲಕ್ಷ ರೂಪಾಯಿಯ ಆಸೆಯಲ್ಲಿ ಮಾಡಬಾರದ ಕೆಲಸವನ್ನು ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ ಯಶೋದ.