ಕೋಲಾರ: ಪ್ರಿಯಕರನ ಜತೆ ಬಂದಿದ್ದ ಯುವತಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಮೂಲದ ಹರ್ಷಿತ (21) ಮೃತ ಯುವತಿ. ತನ್ನ ಸಂಬಂಧಿ ಹಾಗೂ ಪ್ರಿಯಕರ ಹೇಮಂತ್ ಎಂಬುವರ ಜೊತೆ ಬಂದಿದ್ದ ಯುವತಿಯಾಗಿದ್ದು, ಇಬ್ಬರ ನಡುವೆ ಸಣ್ಣ ಜಗಳದಿಂದ ಹರ್ಷಿತಾಳನ್ನು ಬಿಟ್ಟು ಹೋಗಿದ್ದ ಹೇಮಂತ್ ನಂತರ ಸ್ವಲ್ಪ ಹೊತ್ತಿನ ನಂತರ ಬಂದು ನೋಡಲಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವತಿ ಮೃತ ಪಟ್ಟ ಹಿನ್ನೆಲೆ ಪ್ರಿಯಕರ ಹೆದ್ದಾರಿಯಲ್ಲಿ ಬಂದು ಚೀರಾಡುತ್ತಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ್ದಾರೆ. ಇಬ್ಬರು ಸುಣ್ಣಕಲ್ ಅರಣ್ಯ ಪ್ರದೇಶಕ್ಕೆ ವಿಹಾರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತಳ ಪ್ರಿಯಕರ ಹೇಮಂತ್ ಎಂಬಾತನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಯುವತಿ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.