ಶಿವಮೊಗ್ಗ : ಸಾಗರ ಇಲ್ಲಿನ ನೆಹರೂ ಮೈದಾನದ ಸಮೀಪದ ಉರ್ದು ಶಾಲೆ ಬಳಿ ನಡೆದ ಬೈಕ್ ಕಳ್ಳತನದ ಪ್ರಕರಣವನ್ನು ಬೇಧಿಸಿರುವ ನಗರ ಠಾಣೆ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಬುಧವಾರ ಆರೋಪಿ ರಾಮನಗರದ ಗಾರೆ ಕೆಲಸ ಮಾಡುವ ಮಹಮ್ಮದ್ ಇಮ್ರಾನ್(28), ವಶಕ್ಕೆ ಪಡೆದು ಈತನಿಂದ ಸುಮಾರು 70 ಸಾವಿರ ರೂ. ಮೌಲ್ಯದ ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ.ಸೆ. 26 ರಂದು ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಕಳ್ಳತನವಾಗಿತ್ತು. ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯ್ಕ ಹಾಗೂ ಪೇಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸೀತಾರಾಂ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಹಾಗೂ ಟಿ.ಡಿ. ಸಾಗರ್ಕರ್ ನೇತೃತ್ವದಲ್ಲಿ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ರತ್ನಾಕರ್, ವಿಕಾಸ್, ವಿಶ್ವನಾಥ್, ಕೃಷ್ಣಮೂರ್ತಿ ಮತ್ತು ಮಹಿಳಾ ಪೇದೆ ಶಿಲ್ಪಾ ಅವರನ್ನು ಒಳಗೊಂಡ ತಂಡ ತನಿಖೆಯಲ್ಲಿ ಪಾಲ್ಗೊಂಡಿತ್ತು.