ವಿಜಯಪುರ : ಶಾಲಾ ಮಕ್ಕಳಿಗೆ ನೀಡುವ ಹಾಲಿನ ಪೌಡರ್ ತುಂಬಿದ ಪ್ಯಾಕೇಟುಗಳನ್ನು ಅನಧಿಕೃತವಾಗಿ ಮಾರಟಮಾಡಲು ಒಯ್ಯುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ…!
ಇಂಡಿ ಗ್ರಾಮೀಣ ಪೊಲೀಸ ಠಾಣೆ ಗುನ್ನಾ ನಂ: 159/2023 ಕಲಂ; 3 ಮತ್ತು 7 & 420, 201 ರೆ/ವು 34 ಐಪಿಸಿ ದಿನಾಂಕ: 09.10.2023 ರಂದು ಮುಂಜಾನೆ 11:30 ಗಂಟೆ ಸುಮಾರಿಗೆ ಇದರಲ್ಲಿಯ ಆರೋಪಿತರಾದ 1].ಸುಮೀತ ಈಶ್ವರ ಸಾತಪುತೆ ಸಾ// ಉಮದಿ ತಾಲೂಕ ಜತ್ತ ಜಿಲ್ಲಾ ಸಾಂಗ್ಲಿ 2] ನಿಶಾಂತ ಸಿದ್ದರಾಮ ಕಲಶೆಟ್ಟಿ ಸಾ// ಧೂಳಖೇಡ ಹಾಲಿವಸ್ತಿ: ಸೋಲಾಪೂರ 3], ದುಂಡಪ್ಪ ಶಿವನಿಂಗಪ್ಪ ಗಂಗನಹಳ್ಳಿ ಸಾಕಿನ ಗೊರನಾಳ, ತಾ|| ಇಂಡಿ ಇವರಿಬ್ಬರು ಮಹೇಂದ್ರ ಬುಲೋರೋ ಗೂಡ್ಸ್ ಪಿಕ್ಆಫ್ ವಾಹನ ನಂ ಕೆಎ-23, 8315 ನೇದ್ದರಲ್ಲಿ ಅನಧೀಕೃತವಾಗಿ ಹಾಗೂ ಸರಕಾರದಿಂದ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳದೆ ಶಾಲಾ ಮಕ್ಕಳಿಗೆ ಹಂಚಿಕೆಯಾದ ಹಾಲಿನ ಪೌಡರದ 30 ಕೆ.ಜಿ, ತೂಕದ ಒಟ್ಟು 66 ಪ್ಲಾಸ್ಟಿಕ್ ಬ್ಯಾಗಗಳು ಮತ್ತು 20 ಕೆ.ಜಿ. ತೂಕದ ಒಂದು ಬ್ಯಾಗವನ್ನು ತನ್ನ ವಾಹನವನ್ನು ತಾಂಬಾದಲ್ಲಿ ಲೋಡ್ ಮಾಡಿಕೊಂಡು ಆರೋಪಿ ನಿಶಾಂತ ತಂ ಸಿದ್ದರಾಮ ಕಲಶೆಟ್ಟಿ ಸಾ॥ ಧೂಳಖೇಡ ಇವರಿಗೆ ಹೋಗಿ ಒಪ್ಪಿಸುವವರು ಸದರಿ ಹಾಲಿನ ಪಾಕೀಟುಗಳನ್ನು ಆರೋಪಿ ದುಂಡಪ್ಪ ತಂ. ಶಿವನಿಂಗಪ್ಪ ಗಂಗನಹಳ್ಳಿ ಸಾಕಿನ ಗೊರನಾಳ ಇವರು ಹಾಲಿನ ಪೌಡರ ಗುತ್ತಿಗೆದಾರರು ಇದ್ದು ಅವರ ತಾಬಾದಲ್ಲಿಂದ ಖರೀದಿಸಿಕೊಂಡು ಸರಕಾರಕ್ಕೆ ಮೋಸ ಮಾಡಿ ಮತ್ತು ಸರಕಾರದಿಂದ ಬಂದ ಹಾಲಿನ ಪಾಕೀಟುಗಳನ್ನು ನಾಶ ಪಡಿಸಿ 50 ಕೆ.ಜಿ. ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ತುಂಬಿಕೊಂಡು ಹೊರಟಾಗ ಸಿಕ್ಕ ಅಪರಾಧ. ಜಪ್ತ ಮಾಲು: 1]. ಹಾಲಿನ ಪೌಡರ್ದ 30 ಕೆ.ಜಿ.ಯ 66 ಬ್ಯಾಗಗಳು ಮತ್ತು 20 ಕೆ.ಜಿ ಯ ಒಂದು ಬ್ಯಾಗ್, ಒಟ್ಟು 2010 ಕೆ.ಜಿ ಒಟ್ಟು 61 ,33,150/-ರೂ.
2) ಮಹೇಂದ್ರ ಬುಲೋರೋ ಗೂಡ್ಡ ಪಿಕ್ಆಫ್ ವಾಹನ ನಂ ಕೆಎ-23, 8315 ನೇದ್ದರ ಕಿಮ್ಮತ್ತು 2,00,000/-ರೂ ಈ ಬಗ್ಗೆ
ಖಚಿತ ಮಾಹಿತಿಯ ಮೇರೆಗೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ದಾಳಿ ಗೈದು ಆರೋಪಿಗಳನ್ನ ಬಂಧಿಸಿದ್ದಾರೆ.
ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ