ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಸೋಮೇಶ ಗೆಜ್ಜಿ ಅವರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡರು..
ಇಂದು ಮುಂಜಾನೆ 07.00 ಗಂಟೆಯ ಸುಮಾರಿಗೆ ಇಂಡಿ ಗ್ರಾಮೀಣ ಪೊಲೀಸ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಸೋಮೇಶ ಗೆಜ್ಜೆ ಇವರಿಗೆ ಮಾಹಿತಿ ಬಂದಿದ್ದರಲ್ಲಿ ಪ್ರಶಾಂತ ಸಿದ್ದರಾಮ ನಾವಿ ಸಾಕಿನ್ ದೇವರ ನಿಂಬರಗಿ ತಾಲೂಕ ಚಡಚಣ ಈತನು ತನ್ನ ತಾಬಾದಲ್ಲಿ ಅನಧೀಕೃತವಾಗಿ ಸರಕಾರದಿಂದಾಗಲಿ ಅಥವಾ ಸಂಬಂಧಪಟ್ಟ ಇಲಾಖೆಯಿಂದಾಗಿ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ 1 ಕಂಟ್ರಿ ಪಿಸ್ತೂಲ್ ಮತ್ತು 7 ಜೀವಂತ ಗುಂಡುಗಳನ್ನು ಇಟ್ಟುಕೊಂಡು ಇಂಡಿಯಿಂದ ಚಿಕ್ಕಬೇವನುರ ಮಾರ್ಗವಾಗಿ ತನ್ನೂರಿಗೆ ಹೊರಟಿರುವ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ ಪಿ.ಎಸ್.ಐ. ರವರು ಈ ವಿಷಯವನ್ನು ತಮ್ಮ ಮೇಲಾಧಿಕಾರಿಗಳಾದ ಹೆಚ್.ಡಿ. ಆನಂದ ಕುಮಾರ ಎಸ್.ಪಿ ವಿಜಯಪುರ ಮತ್ತು ಶಂಕರ ಮಾರಿಹಾಳ ಹೆಚ್ಚುವರಿ ಎಸ್.ಪಿ ವಿಜಯಪುರ ಮತ್ತು ಜಗದೀಶ್ ಹೆಚ್.ಎಸ್ ಡಿ.ಎಸ್.ಪಿ ಇಂಡಿ ಹಾಗೂ ಮಲ್ಲಿಕಾರ್ಜುನ ಡಪ್ಪಿನ ಸಿ.ಪಿ.ಐ ಇಂಡಿ ಗ್ರಾಮಾಂತರ ರವರಿಗೆ ಫೋನ್ ಮುಖಾಂತರ ಮಾಹಿತಿ ಬಂದ ವಿಷಯ ತಿಳಿಸಿ ದಾಳಿ ಮಾಡುವ ಕುರಿತು ಮೇಲಾಧಿಕಾರಿಗಳ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಪಿ.ಎಸ್.ಐ. ಸೋಮೇಶ ಗೆ ಇವರು ತಮ್ಮ
ಸಿಬ್ಬಂದಿಯಾದ ಐ ಎ ಕೊಟ್ಯಾಳ, ಎಸ್ ಎಸ್ ಶಿರಶ್ಯಾಡ , ಎಸ್ ವೈ ಜೇರಟಗಿ, ಆರ್ ಪಿ ಗಡೆದ, ಎಂ ಎಸ್ ಕೂಡಿಗನುರ ಇವರು ಸೇರಿ ಇಂದು ದಿನಾಂಕ 01 09 2023 ರಂದು ಮುಂಜಾನೆ 8 ಘಂಟೆ 15 ನಿಮಿಷ ಸುಮಾರಿಗೆ ಚಿಕ್ಕಬೇವನುರ ಹತ್ತಿರ ಇರುವ ಸರಕಾರಿ ಆಸ್ಪತ್ರೆಯ ಹತ್ತಿರ ರಸ್ತೆಯ ಮೇಲೆ ಹೊರಟಿದ್ದ ಆರೋಪಿ ಪ್ರಶಾಂತ ಸಿದ್ದಾರಾಮ ನಾವಿ ಸಾಕೀನ ದೇವರ ನಿಂಬರಗಿ ತಾಲೂಕ ಚಡಚಣ ಈತನ ಮೇಲೆ ದಾಳಿ ಮಾಡಿದರು.
ಈ ದಾಳಿಯಲ್ಲಿ
*1 ಕಂಟ್ರಿ ಪಿಸ್ತೂಲ್ ಅಂದಾಜು ಬೆಲೆ 20 ಸಾವಿರ*
*7 ಜೀವಂತ ಗುಂಡಿಗಳು ಅಂದಾಜು ಬೆಲೆ 3500 ರೂಪಾಯಿ*
*1 ಎಕ್ಸ್ಟ್ರಾ ಮ್ಯಾಗಜಿನ ಅಂದಾಜು ಬೆಲೆ 500 ರೂಪಾಯಿ*
ಈ ತರಹ ವಸ್ತುಗಳನ್ನು ವಶಪಡಿಸಿಕೊಂಡು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಗನ್ನೆ ನಂಬರ್ 127/2023 ಕಲಂ 25(1) (A), 29 ( A) & (B) ಭಾರತೀಯ ಆಯುಧ ಕಾಯ್ದೆ ನೆದರ್ ಅಡಿಯಲ್ಲಿ ಪ್ರಕರಣವನ್ನು ಎ.ಎಸ್.ಐ ಎನ್ ಡಿ ಅವಟಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿದಾರೆ.