ಹಣ ವಸೂಲಿಗೆ ಇಳಿದ ಕುಮಾರಿ ಮೋನಿಕಾ ಬಸವರಾಜ್ BED ಕಣ್ಣಿ ಕಾಲೇಜ್ ವಿರುದ್ಧ ಕ್ರಮ ತೆಗೆದು ಕೊಳ್ಳುಲು ಜಿಲ್ಲಾಧಿಕಾರಿಗೆ ದಲಿತ ವಿದ್ಯಾರ್ಥಿ ಪರಿಷತ್ ಯಿಂದ ಮನವಿ ಸಲ್ಲಿಸಲಾಯಿತು
ವಿಜಯಪುರ 19, ನವಂಬರ್ ವಿಜಯಪುರ ನಗರದಲ್ಲಿರುವ ಕುಮಾರಿ ಮೋನಿಕಾ ಬಸವರಾಜ್ ಕಣ್ಣಿ BEd ಕಾಲೇಜ್ ಸಂಸ್ಥೆ. ವಿದ್ಯಾರ್ಥಿಗಳಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ, (ಡೊಣೆಷನ್ ರೂಪದಲ್ಲಿ) ಒಬ್ಬ ವಿದ್ಯಾರ್ಥಿಗೆ ಎರೆಡು ವರಿ ಯಿಂದ ಮೂರು ಲಕ್ಷ ರೂಪಾಯಿ ವಸೂಲಿ ದಂದೆಗೆ ಇಳಿದಿದ್ದಾರೆ. ಎಂದು ಆರೋಪಿಸಲಾಗಿದೆ
ದಲಿತ ವಿದ್ಯಾರ್ಥಿ ಪರಿಷತ್ ಮುಖಾಂಡಾರಾದ ಅಕ್ಷಯ್ ಕುಮಾರ್ ಅಜಮನಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಆಧಿನದಲ್ಲಿ ಬರುವ ಖಾಸಗಿ ಸಂಸ್ಥೆಯ ಕುಮಾರಿ ಮೋನಿಕಾ ಬಸವರಾಜ್ BEd ಕಾಲೇಜ್ ಹಣ ವಸೂಲಿ ಸಂಸ್ಥೆ ಯಾಗಿದೆ,
ಕಾಲೇಜು ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸುವುದಕ್ಕೆ ಬರುತ್ತಾರೆ, ತರಬೇತಿ ಪಡೆಯಲು ಬರುತ್ತಿರುವ ವಿದ್ಯಾರ್ಥಿಗಳಿಗೆ ಸರಿಯಾಗಿ ಬೋಧಿಸದೆ ಮನ ಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ.
ವಿಶ್ವವಿದ್ಯಾಲಯ ನಿಗದಿ ಮಾಡಿದ ಫೀ ತೆಗೆದುಕೊಳ್ಳದೆ, ಸರ್ಕಾರದ ನಿಯಮಾವಳಿ ಪ್ರಕಾರ ಜಿ.ಎಸ್.ಟಿ ರಿಸಿಪ್ಟ್ ಅಷ್ಟೇ ಅಲ್ಲ, ಫೀ ಕಟ್ಟಿರುವ ರಿಸಿಪ್ಟ್ ಕೂಡ ನೀಡುವುದಿಲ್ಲ.
ಗ್ರಾಮೀಣದ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಅಧಿಕವಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ, ಎರೆಡು ಅಥವಾ ಮೂರು ಲಕ್ಷ ಹಣ ನೀಡಿದರೆ ಸಾಕು ಮನೆಯಲ್ಲೇ ಕುಳಿತು ಅಂಕಪಟ್ಟಿ ನೀಡುತ್ತಿದ್ದಾರೆ.
ಪ್ರತಿ ದಿನ ಕ್ಲಾಸಿಗೆ ಬರುವ ವಿದ್ಯಾರ್ಥಿಗಳು ಎರಡು ಲಕ್ಷ ರೂಪಾಯಿ ಫೀ ಯಾದರೆ ನೇರವಾಗಿ ಪರೀಕ್ಷೆ ಬಂದರೆ ಮೂರು ಲಕ್ಷ ಅಂತೇಳಿ ಬೇರೆ ಬೇರೆ ತರ ಹಣ ವಸೂಲಿ ಮಾಡಿ, ನಿಯತ್ತಾಗಿ ಓದಬೇಕೆನ್ನುವ ವಿದ್ಯಾರ್ಥಿಗಳಿಗೆ ಮೋಸ ಎಸಗುತ್ತಿದ್ದಾರೆ.
ಸರ್ಕಾರ ನೀಡಿದ ರೋಸ್ಟರ್ ಪ್ರಕಾರ ಪ್ರವೇಶ ಪಡೆಯದೆ, ಕಾನೂನನ್ನು ಉಲ್ಲಂಘಿಸಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ.
ವಿಶ್ವವಿದ್ಯಾಲಯದ ಯೋಜನೆ ವಿಸ್ತೀರ್ಣ ಅರ್ಜಿಯಲ್ಲಿ ಕೊಟ್ಟಂತಹ ಬೋಧಕರು ಯಾರು ಇಲ್ಲಾ. ಹೆಸರು ಇಲ್ಲದ ಸಿಬ್ಬಂದಿಗಳಿಂದ ಬೋಧನೆ ಮಾಡಿಸುತ್ತಿದ್ದಾರೆ. ಕ್ವಾಲಿಫೈಡ್ ಇಲ್ಲದ ವ್ಯಕ್ತಿಗಳಿಂದ ತರಬೇತಿ ನೀಡಿಸುತ್ತಿದ್ದಾರೆ ಎಲ್ಲವೂ ದುಡ್ಡಿನ ವ್ಯವಹಾರದ ಮೇಲೆ ಇವರು ಶಿಕ್ಷಣ ನೀಡುತ್ತಿದ್ದಾರೆ ತರಬೇತಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಜಿಲ್ಲಾಧಿಕಾರಿಗಳ, ಶಿಕ್ಷಣ ಇಲಾಖೆ ಇಂತಹ ಭ್ರಷ್ಟ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ವಹಿಸದಿದ್ದರೆ ಶಿಕ್ಷಣ ಎಲ್ಲವೂ ವ್ಯಾಪಾರವಾಗುತ್ತದೆ ಎಂದರು.
ಮುಂದಿನ ದಿನಮಾನಗಳಲ್ಲಿ ಇಂಥಹ ಭ್ರಷ್ಟ ಸಂಸ್ಥೆಗಳ ಮೇಲೆ ನಿಗಾ ವಹಿಸಿ ಡೊನೇಷನ್ ಹಾವಳಿಯನ್ನು ಕಡಿಮೆ ಮಾಡದಿದ್ದರೆ ದಲಿತ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರಮಾಣದ ಹೋರಾಟದೊಂದಿಗೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ದಾವೂದ್ ನಾಯ್ಕೋಡಿ, ಮಹಾಂತೇಶ್ ಚಾಲವಾದಿ, ಯಮನೂರಿ ಮಾದರ, ಶಂಕರ್, ಪ್ರಶಾಂತ್ ಹಂಗರಗಿ, ಸಂದೇಶ್ ಕುಮುಟಗಿ, ಪ್ರದೀಪ್, ಪ್ರವೀಣ್, ಮೋನಿಕಾ ಕಣ್ಣಿ ಕಾಲೇಸ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು.