ಅಲ್ಲು ಅರ್ಜುನ್ ಮೇಲಿನ ಕೇಸ್ ಹಿಂಪಡೆಯಲು ಸಜ್ಜಾದ ಮೃತ ಮಹಿಳೆಯ ಪತಿ
ನಟ ಅಲ್ಲು ಅರ್ಜುನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ತಿರುವು ಬಂದಿದೆ
ಸಂಧ್ಯಾ ಥಿಯೇಟರ್ನಲ್ಲಿ ನಡೆದ ದುರಂತದಲ್ಲಿ ಸಾವನ್ನಪ್ಪಿದ ಮಹಿಳೆಯ ಪತಿ, ನಟನ ವಿರುದ್ಧದ ಕೇಸ್ ಅನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮೃತ ಮಹಿಳೆಯ ಪತಿ ಈ ಅವಘಡದಲ್ಲಿ ಅಲ್ಲು ಅರ್ಜುನ್ ಅವರದ್ದು ತಪ್ಪಿಲ್ಲ. ನಟ ಸಹಜವಾಗಿಯೇ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ. ಹೀಗಾಗಿ ನಾನು ಕೇಸ್ ವಾಪಾಸ್ ಪಡೆಯಲು ಸಿದ್ಧನಿದ್ದೇನೆ ಎಂದಿದ್ದಾರೆ.