ಹಾಸನ : ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ಮದ್ಯ ಸೇವನೆ ಸಂಬಂಧ ನಡೆದ ಪಂದ್ಯದಲ್ಲಿ ತಿಮ್ಮೇಗೌಡ (60) ಎಂಬಾತ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಸಿಗರನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕೃಷ್ಣೇಗೌಡ ಎಂಬುವರು ನೀಡಿದ ಮದ್ಯವನ್ನು ದೇವರಾಜು, ತಿಮ್ಮೇಗೌಡರ ಜತೆ ಅರ್ಧ ಗಂಟೆಯಲ್ಲಿ 90 ಎಂಎಲ್ನ 10 ಪ್ಯಾಕೆಟ್ ಮದ್ಯ (5 ಕ್ವಾಟರ್) ಸೇವನೆಗೆ ಚಾಲೆಂಜ್ ಮಾಡಿದ್ದು, ತಿಮ್ಮೇಗೌಡ 90 ಎಂಎಲ್ನ 10 ಪ್ಯಾಕೆಟ್ ಮದ್ಯ ಸೇವಿಸಿದ ಅರ್ಧ ಗಂಟೆ ನಂತರ ರಕ್ತವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಿಮ್ಮೇಗೌಡರನ್ನು ಗ್ರಾಮದ ನಾಲ್ಕಾರು ಮಂದಿ ಎತ್ತಿಕೊಂಡು ಹೋಗಿ ಮನೆಯಲ್ಲಿ ಮಲಗಿಸಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ನಿತ್ರಾಣಗೊಂಡಿದ್ದ ತಿಮ್ಮೇಗೌಡ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಮೃತರ ಪುತ್ರಿ ದೂರು ದಾಖಲಿಸಿದ್ದು, ದೇವರಾಜ ಹಾಗೂ ಕೃಷ್ಣೇಗೌಡರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ತಿಮ್ಮೇಗೌಡರ ಮೃತದೇಹವನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ..