ಹಾಸನ : ಪೊಲೀಸ್ ಅಧಿಕಾರಿ ಪುತ್ರನ ಪುಂಡಾಟಕ್ಕೆ ಅಮಾಯಕ ವೃದ್ಧನೊಬ್ಬ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ಬಳಿ ನಡೆದಿದೆ.
ಹುಳಿಮಾವು ಗ್ರಾಮದ 68 ವರ್ಷದ ಗುರುಸ್ವಾಮಿ ಮೃತ ವೃದ್ದನಾಗಿದ್ದಾನೆ. ಗುರುಸ್ವಾಮಿ ಹಸುಗಳನ್ನು ಮೇಯಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಯುವಕ ಸೈಯದ್ ಇಮಾನ್ ವೀಲಿಂಗ್ ಮಾಡಿಕೊಂಡು ಬಂದು ವೃದ್ಧನಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಗುರುಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸೈಯದ್ ಇಮಾನ್ ಮೈಸೂರಿನ ಉದಯಗಿರಿ ನಿವಾಸಿಯಾಗಿದ್ದಾನೆ. ಈ ಯುವಕ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಪುತ್ರನಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ವೀಲಿಂಗ್ ವಿಚಾರಕ್ಕೆ ವಶಕ್ಕೆ ಪಡೆದು ದಂಡ ಹಾಕಲಾಗಿತ್ತು. ಇದಷ್ಟೆ ಅಲ್ಲದೆ ಈತನ ವಿರುದ್ಧ ಕಳ್ಳತನ ಆರೋಪ ಕೂಡ ಇತ್ತು. ಸದ್ಯ ಆರೋಪಿ ಸೈಯದ್ ಇಮಾನ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೈಸೂರಿನ ಕೆಆರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ಮೃತ ವೃದ್ಧನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.