ವಿಜಯಪುರ ಪೊಲೀಸ್ ರಿಂದ ಮಹತ್ವದ ಕಾರ್ಯಾಚರಣೆ ಕೊಲೆ ಮಡಿದ ಆರೋಪಿ ಅಂದರ್ ವಿಜಯಪುರ ಸೇಹರಿನಲ್ಲಿ ಇತ್ತೀಚಿಗೆ ಕೊಲೆ ನಡೆತಿತ್ತು ವಿಜಯಪುರ ಪೊಲೀಸ್ ಗ್ರಾಮೀಣ ಪೊಲೀಸ್ ಠಾಣಾ ರಾತ್ರಿ ಹಗಲು ಎನ್ನದೆ ಅಪರಾಧಿ ಶೋಧನೆಗೆ ತೊಡಗಿದರು ಇಂದು ಕೊಲೆ ಪ್ರಕರಣದ ಆರೋಪಿತರ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ
ಆರೋಪಿ ರಮೇಶ ಗೇಮು ಲಮಾಣಿ ಈತನ ಮಗಳು ಕಾವೇರಿ ಇವಳಿಗೆ ಸಚಿನ ಪ್ರೇಮಸಿಂಗ ರಾಠೋಡ, ಸಾ: ಅರಕೇರಿ ಎಲ್ಟಿ ನಂ: 1 ಇವರ ಅಣ್ಣ ಸತೀಶ ಇತನಿಗೆ ಮದುವೆ ಮಾಡಿ ಕೊಡಲು ಈ ಹಿಂದೆ ಕೇಳಿದ್ದು, ಅದಕ್ಕೆ ಆರೋಪಿ ರಮೇಶ ತನ್ನ ಮಗಳ ಮದುವೆಗೆ ನಿರಾಕರಿಸಿದ್ದು, ಅದಕ್ಕೆ ಆರೋಪಿತನ ಮಗಳು ಭಾವಿಗೆ ಹಾರಿ ಮರಣ ಹೊಂದಿದ್ದು, ಅವಳು ತೀರಿಕೊಳ್ಳಲು ಪಿರ್ಯಾದಿಯ ಅಣ್ಣ ಸತೀಶ ಇತನೇ ಕಾರಣ ಅಂತಾ ಸಿಟ್ಟಾಗಿದ್ದು, ದಿನಾಂಕ: 28.01.2025 ರಂದು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ಪಿರ್ಯಾದಿಯ ಅಣ್ಣನಿಗೆ ಕೊಲೆ ಮಾಡುವ ಉದ್ದೇಶದಿಂದ ಸತೀಶ ಪ್ರೇಮಸಿಂಗ ರಾಠೋಡ ಇತನಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಮತ್ತು ಚಾಕುವಿನಿಂದ ಎದೆಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುತ್ತಾನೆ.
ಈ ಬಗ್ಗೆ ಮೃತನ ತಮ್ಮನಾದ ಸಚಿನ ಪ್ರೇಮಸಿಂಗ ರಾಠೋಡ, ಸಾ: ಅರಕೇರಿ ಎಲ್ ಟಿ ನಂ: 1 ರವರು ನೀಡಿದ ಪಿರ್ಯಾದಿಯ ಮೇರೆಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 40/2025 ಕಲಂ: 103(1), ಸಹ ಕಲಂ: 3(5) ಬಿ.ಎನ್.ಎಸ್ ಕಾಯ್ದೆ -2023 ಮತ್ತು 25(ಎ), 27(3), 29(ಬಿ) ಭಾರತೀಯ ಆಯುಧ ಕಾಯ್ದೆ ಅಡಿ ಪ್ರಕರಣ
ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಒಟ್ಟು 6 ಜನ ಆರೋಪಿತರಿಗೆ ದಸ್ತಗೀರ ಮಾಡಲಾಗಿದೆ. ಸದರಿ ಪ್ರಕರಣದಲ್ಲಿ ಆರೋಪಿತರಿಗೆ ಕೃತ್ಯಕ್ಕಾಗಿ ಕಂಟ್ರಿ ಪಿಸ್ತೂಲ್ ಪೂರೈಸಿದ ಆರೋಪಿ ನಂ: 5 ಸಾಗರ @ ಸುರೇಶ ಲಕ್ಷ್ಮಣ ರಾಠೋಡ, ಸಾ: ಹಂಚನಾಳ ಎಲ್ ನಂ: 1 ಈತನು ದಿನಾಂಕ: 13.02.2025 ರಂದು ಮಹಿಳಾ ವಿಶ್ವವಿದ್ಯಾಲಯ ಹತ್ತಿರದ ತೊರವಿ ತಾಂಡಾ ರಸ್ತೆಗೆ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಸ್ತಗೀರ ಮಾಡಲು ತನಿಖಾ ತಂಡವು ತೆರಳಿದ್ದು, ನಸುಕಿನ ಜಾವ 5.20 ಗಂಟೆಯ ಸುಮಾರಿಗೆ ಆರೋಪಿ ಸಾಗರ @ ಸುರೇಶ ರಾಠೋಡ ಈತನು ಒಂದು ಲಾರಿಯಲ್ಲಿ ಬಂದು ಇಳಿದಿದ್ದು, ಆತನಿಗೆ ಪೊಲೀಸ್ ತಂಡ ಹಿಡಿಯಲು ಬೆನ್ನಟ್ಟಿದಾಗ ಆರೋಪಿತನು ಚಾಕುವಿನಿಂದ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದು, ಆಗ ಪಿಎಸ್ಐ ವಿಜಯಪುರ ಗ್ರಾಮೀಣ ರವರು ಆತ್ಮ ರಕ್ಷಣೆಗಾಗಿ ಆರೋಪಿತನ ಕಾಲಿಗೆ ಗುಂಡು ಹಾರಿಸಿ. ಆತನಿಗೆ ವಶಕ್ಕೆ ಪಡೆದಿರುತ್ತಾರೆ. ಸದರಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲ 6 ಜನ ಆರೋಪಿತರನ್ನು ದಸ್ತಗೀರ ಮಾಡಲಾಗಿದೆ.
ಬಂಧಿತ ಆರೋಪಿತರು:
1) ರಮೇಶ ಗೇಮು ಲಮಾಣಿ. 35 ವರ್ಷ, ಸಾ: ಅರಕೇರಿ ಎಲ್ಟಿ ನಂ: 1
2) ಸುಭಾಸ ಧರ್ಮು ಚವ್ಹಾಣ, 33 ವರ್ಷ ಸಾ: ಹಂಚನಾಳ ಎಲ್ಟಿ ನಂ: 1
3) ವಿಜಯ ಗಂಗಾರಾಮ ರಾಠೋಡ, 54 ವರ್ಷ, ಸಾ: ಅರಕೇರಿ ಎಲ್ಟಿ ನಂ: 1
4) ರಾಮು ಬದ್ದು ರಾಠೋಡ, 40 ವರ್ಷ, ಸಾ: ಹಂಚನಾಳ ಎಲ್ಟಿ ನಂ: 1
5) ಸಾಗರ @ ಸುರೇಶ ಲಕ್ಷ್ಮಣ ರಾಠೋಡ, ಸಾ: ಹಂಚನಾಳ ಎಲ್ ನಂ: 1
6) ಲಕ್ಷ್ಮಣ ರಾಠೋಡ, 42 ವರ್ಷ. ಸಾ: ಹಂಚನಾಳ ಎಲ್ಟಿ ನಂ: 1
ಶ್ರೀ ಲಕ್ಷ್ಮಣ ನಿಂಬರಗಿ, ಐಪಿಎಸ್ ಪೊಲೀಸ್ ಅಧೀಕ್ಷಕರು, ವಿಜಯಪುರ ಜಿಲ್ಲೆ.
ವಿಜಯಪುರದ ಜನರ ಮುಖದಲ್ಲಿ ಮಂದಹಾಸ ಮೂಡಿಸಿದ ವಿಜಯಪುರ ಪೊಲೀಸ್ ರಿಗೆ
ಜಿಲ್ಲೆಯ ಪರವಾಗಿ ನಾವು ಅಭಿನಂದನೆ ಸಲ್ಲಿಸುತ್ತೇವೆ

