ಬೆಳಗಾವಿ: ರಾಜ್ಯದಲ್ಲಿ ರೂ. 34, 114 ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಯಿತು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆ ಜರುಗಿತು.
ಸರ್ಕಾರ ದ ಮಹತ್ವದ ನಿರ್ಧಾರ ಕೈಗಾರಿಕಾ ಕ್ರಾಂತಿ/ ಉದ್ಯೋಗ ಸೃಷ್ಟಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ
• 34,114 ಕೋಟಿ ರೂ. ಹೂಡಿಕೆಗೆ ಅನುಮೋದನೆ
• ಒಟ್ಟು 24 ಉದ್ಯಮಗಳ ಸ್ಥಾಪನೆಗೆ ಒಪ್ಪಿಗೆ
• 13, 308 ಉದ್ಯೋಗ ಸೃಷ್ಟಿಯ ನಿರೀಕ್ಷೆ
• ಉತ್ತರ ಕರ್ನಾಟಕದಲ್ಲಿ ರೂ 9,461 ಕೋಟಿ ಮೊತ್ತದ ಬಂಡವಾಳ ಹೂಡಿಕೆ
• ಏಕಗವಾಕ್ಷಿ ವ್ಯವಸ್ಥೆಯಲ್ಲಿ 30 ದಿನಗಳೊಳಗೆ ಅನುಮೋದನೆ ನೀಡಲು ಕ್ರಮ,
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ Siddaramaiah, ಉಪ ಮುಖ್ಯಮಂತ್ರಿ DK Shivakumar, ಸಚಿವರಾದ M B Patil, Satish Jarkiholi , ಚೆಲುವರಾಯಸ್ವಾಮಿ, Priyank Kharge ಹಾಗೂ ಉನ್ನತ ಮಟ್ಟದ ಸಮಿತಿಯ ಸದಸ್ಯರಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ , ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.