ವಿಜಯಪುರ: ವ್ಯಕ್ತಿ ಓರ್ವನನ್ನು ಬೆದರಿಸಿ ಲೂಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಹಾಗೂ ಲೂಟಿ ಮಾಡಿದ್ದ ವಸ್ತುಗಳು ವಶಕ್ಕೆ ಪಡೆದ ಆಲಮೇಲ ಠಾಣೆಯ ಪೊಲೀಸರು.
ದಿನಾಂಕ ೦೫.೧೦.೨೦೨೩ ರಂದು ೧೬:೩೦ ಗಂಟೆಗೆ ಮಹಾಂತೇಶ ತಂದೆ ಮಹಾದೇವಪ್ಪ ಒಲೇಕಾರ, ಮಲಘಾಣ ತಾ: ಆಲಮೇಲ, ಜಿ: ವಿಜಯಪುರ ಇವರು ಆಲಮೇಲ ಪೊಲೀಸ ಠಾಣೆಗೆ ದೂರು ಕೊಟ್ಟ ಮೇರೆಗೆ. ಫಿರ್ಯಾದುದಾರನು ಸಿಂದಗಿಯಿಂದ ಆಲಮೇಲ ಪಟ್ಟಣಕ್ಕೆ ಬರುವಾಗ ಆಲಮೇಲ ದಾಟಿ ಅಫಜಲಪೂರ ರೋಡಿಗೆ ಇರುವ ಪೆಟ್ರೋಲ ಪಂಪ ಹತ್ತಿರ ಬೆಳಿಗ್ಗೆ ೧೧:೧೫ ಗಂಟೆಯ ಸುಮಾರಿಗೆ ಇಳಿದಿದ್ದು, ಅಷ್ಟರಲ್ಲಿ ಅಫಜಲಪುರ ಕಡೆಯಿಂದ ಒಂದು ಹೋಂಡಾ ಶೈನ್ ಮೋಟರ್ ಸೈಕಲ್ ನಂ: ಕೆಎ-೨೮-ಇಯು-೬೧೦೭ ರ ಮೇಲೆ ಒಬ ್ಬ ವ್ಯಕ್ತಿಯು ಬರುತ್ತಿದ್ದು, ಆಗ ಫಿರ್ಯಾದುದಾರನು ಅವನಿಗೆ ಕೈಸನ್ನೆ ಮಾಡಿ ನಿಲ್ಲಿಸಿ ನನಗೆ ಆಲಮೇಲ ಪಟ್ಟಣದ ಬಸ್ ನಿಲ್ದಾಣದ ವರೆಗೆ ಕರೆದುಕೊಂಡು ಹೋಗು ಅಂತಾ ಹೇಳಿದ್ದು, ಆಗ ಬೈಕ್ ಸವಾರನು ತನ್ನ ಮೋಟರ್ ಸೈಕಲ್ ಮೇಲೆ ಕೂಡಿಸಿಕೊಂಡು ಆಲಮೇಲ ಬಸ್ ನಿಲ್ದಾಣದ ಕಡೆಗೆ ಕರೆದುಕೊಂಡ ಹೋಗದೆ ಬೇರೆ ಕಡೆಗೆ ಬೈಕ್ ಚಲಾಯಿಸುತ್ತಾ ಸುಮಾರು ಅರ್ದಾ ಕಿ.ಮೀ ದೂರದ ವರೆಗೆ ಕರೆದುಕೊಂಡು ಹೋಗಿ ಅಲ್ಲಿ ಮೋಟರ್ ಸೈಕಲ್ ನಿಲ್ಲಿಸಿ ಅವನು ಯಾರಿಗೋ ಪೊನ್ ಮಾಡಿದ್ದು, ಆಗ ೩ ಜನರು ಬಂದು ಫಿರ್ಯಾದುದಾರನನ್ನು ಮತ್ತೆ ಸುಮಾರು ೧ ಕಿ.ಮೀ ವರೆಗೆ ಮುಂದೆ ಕರೆದುಕೊಂಡು ಹೋಗಿ ಒಂದು ಜಮೀನದಲ್ಲಿರುವ ಗುಡಿಸಲುದಲ್ಲಿ ಇಟ್ಟು ಫಿರ್ಯಾದುದಾರನಿಗೆ ಎಲ್ಲಿಗೂ ಹೋಗದಂತೆ ಅಡ್ಡಗಟ್ಟಿ ನಿಂತು ನಾಲ್ಕು ಜನರಲ್ಲಿ ಒಬ್ಬನು ಫಿರ್ಯಾದುದಾರನ ಮೋಬೈಲ್ ಕಸಿದುಕೊಂಡು, ಫಿರ್ಯಾದಿಗೆ ಹೆದರಿಸಿ, ಬೆದರಿಸಿ, ಆ ನಾಲ್ಕು ಜನರು ಕೈಯಿಂದ ಹಾಗೂ ಬಡಿಗೆಯಿಂದ ಹೊಡೆದು ಫಿರ್ಯಾದಿಯ ಕೈಯಲ್ಲಿರುವ ಅರ್ದ ತೊಲಿ ಬಂಗಾರದ ಉಂಗುರ ಹಾಗೂ ಕೊರಳಲ್ಲಿರುವ ಒಂದುವರೆ ತೋಲಿ ಬಂಗಾರದ ಲಾಕಿಟನ್ನು ಮತ್ತು ಪ್ಯಾಂಟಿನ ಕಿಸೆಯಲ್ಲಿರುವ ೧೬೦೦೦/- ರೂಪಾಯಿ ಹಣವನ್ನು ಕಸಿದುಕೊಂಡು, ನಂತರ ಫಿರ್ಯಾದಿಯ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿಸಿ ಅರೆಬೆತ್ತಲೆ ಮಾಡಿ, ಬೆತ್ತಲೆ ವಿಡಿಯೋವನ್ನು ಮಾಡಿ ನಿನ್ನ ಮನೆಯವರಿಗೆ ಕಳಿಸುತ್ತೇವೆ ಅಂತಾ ಭಯ ಹಾಕಿ ಗೂಗಲ್ಪೇ ಪಾಸವರ್ಡ ಪಡೆದುಕೊಂಡು ಫಿರ್ಯಾದಿಯ ಖಾತೆಯಿಂದ ರೂ ೧೩೦೦೦/- ಗಳನ್ನು ತಮ್ಮ ಅಕೌಂಟಿಗೆ ವರ್ಗಾಯಿಸಿಕೊಂಡಿರುತ್ತಾರೆ ಅಂತಾ ವಗೈರೆ ಫಿರ್ಯಾದು ನೀಡಿದ್ದು, ಅದನ್ನು ಆಲಮೇಲ ಪೊಲೀಸ್ ಠಾಣಾ ಗುನ್ನೆ ನಂ: ೧೧೧/೨೦೨೩ ಕಲಂ ೩೯೨,೩೯೪,೫೦೬ ಐಪಿಸಿ ನೇದ್ದಕ್ಕೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ಸದರಿ ಪ್ರಕರಣದಲ್ಲಿ ಸುಲಿಗೆ ಮಾಡಿರುವ ಆರೋಪಿತರ ಪತ್ತೆ ಕುರಿತು ಸೋನಾವನೆ ರಿಷಿಕೇಶ ಭಗವಾನ, ಐಪಿಎಸ್, ಪೊಲೀಸ್ ಅಧೀಕ್ಷಕರು, ವಿಜಯಪುರ ಮತ್ತು ಶಂಕರ ಮಾರಿಹಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪುರ ರವರ ಮಾರ್ಗದರ್ಶನದಲ್ಲಿ ಜಗದೀಶ್ ಎಚ್ ಎಸ್, ಪೊಲೀಸ್ ಉಪಾಧೀಕ್ಷಕರು ಇಂಡಿ ಉಪ ವಿಭಾಗ ರವರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು, ಸದರ ತಂಡದಲ್ಲಿ ಡಿ ಹುಲುಗಪ್ಪ, ಸಿಪಿಐ ಸಿಂದಗಿ ವೃತ್ತ ಮತ್ತು ಎನ್ ಜಿ ಅಪನಾಯ್ಕರ, ಪಿಎಸ್ಐ (ಅಪರಾಧ ವಿಭಾಗ) ಆಲಮೇಲ ಪಿ.ಎಸ್ ಮತ್ತು ಕುಮಾರ ಹಾಡಕಾರ, ಪಿಎಸ್ಐ (ಕಾ&ಸೂ) ಆಲಮೇಲ ಪೊಲೀಸ್ ಠಾಣೆ, ಹಾಗೂ ಸಿಬ್ಬಂದಿಗಳು ತನಿಖಾ ತಂಡವು ಪ್ರಕರಣದಲ್ಲಿ ವೈಜ್ಞಾನಿಕ ವಿಧಾನದಿಂದ ತನಿಖೆ ಮಾಡಿ, ಕೇವಲ ೦೩ ದಿನದೊಳಗೆ ಪ್ರಕರಣವನ್ನು ಬೇಧಿಸಿ ಸುಲಿಗೆ ಮಾಡಿದ ಆರೋಪಿತರಲ್ಲಿ ಎರಡು ಜನರನ್ನು ಈ ದಿನ ದಿನಾಂಕ: ೦೮.೧೦.೨೦೨೩ ರಂದು ಪತ್ತೆ ಮಾಡಿ ಬಂಧಿಸಿದ್ದರಲ್ಲಿ ೧] ಗಾಲೀಬ ತಂದೆ ಪರಶುರಾಮ ಯಂಟಮಾನ, ಸಾ|| ಆಲಮೇಲ ಜಿ|| ವಿಜಯಪುರ ಇವನಿಗೆ ಹಾಗೂ ೨ನೇ ದವನು ಅಪ್ರಾಪ ್ತ ಬಾಲಕನಿರುತ್ತಾನೆ. ಸದರಿಯವರು ಆಲಮೇಲ ಪಟ್ಟಣದ ರಹವಾಸಿಗಳಿರುತ್ತಾರೆ. ಇವರಿಂದ ಸುಲಿಗೆಯಾದ ಬಂಗಾರದ ಲಾಕೀಟ್ ಚೈನ್ ಹಾಗೂ ಬಂಗಾರದ ಉಂಗುರು ಹಾಗೂ ರೋಖ ಹಣ ೮,೦೦೦/- ರೂ ಗಳನ್ನು ಜಪ್ತಪಡಿಸಿಕೊಂಡಿದ್ದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಹೋಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆಎ-೨೮-ಇಯು-೬೧೦೭ ನೇದ್ದನ್ನು ಜಪ್ತ ಮಾಡಿದ್ದು ಇರುತ್ತದೆ. ಸದರಿ ಪ್ರಕರಣದ ಇನ್ನೂ ಎರಡು ಜನ ಆರೋಪಿತರು ಪರಾರಿ ಇದ್ದು, ಸದರಿಯವರ ಪತ್ತೆ ಕಾರ್ಯ ನಡೆದಿರುತ್ತದೆ. ಈ ಪ್ರಕರಣದಲ್ಲಿ ಆರೋಪಿತರನ್ನು ಕೇವಲ ೦೩ ದಿನದೊಳಗೆ ಆರೋಪಿತರನ್ನು ಹಾಗೂ ಸುಲಿಗೆಯಾದ ಮುದ್ದೆ ಮಾಲನ್ನು ಪತ್ತೆ ಮಾಡಿ ಸುಲಿಗೆಯಾದ ಮಾಲಿನ ಸಮೇತ ಬಂಧಿಸಿ ಧಕ್ಷತೆ ಹಾಗೂ ಚುರುಕುತನದಿಂದ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಸೋನಾವನೆ ರಿಷಿಕೇಶ ಭಗವಾನ, ಪೊಲೀಸ್ ಅಧೀಕ್ಷಕರು ವಿಜಯಪುರ ಮತ್ತು ಶಂಕರ ಮಾರಿಹಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯಪುರ ರವರುಗಳು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ. ಎಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.