ವಿಜಯಪುರ : ನಿನ್ನೆ 7 ದಿವಸದ ಗಣಪತಿ ವಿಸರ್ಜನೆ ಗೆ ಸರಕಾರದ ಆದೇಶದಂತೆ ಎಲ್ಲ ಮಧ್ಯದ ಅಂಗಡಿಗಳು ಬಂದ್ ಇದ್ದು, ಮತ್ತು ಮಧ್ಯ ಮಾರಾಟ ನಿಷೇಧವಿದ್ದು (Dry Day), ವಿಜಯಪುರ ನಗರದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವೇಳೆ ಜಲನಗರ ಪೊಲೀಸರು ದಾಳಿ ಗೈದು ಅನಧಿಕೃತ ಮಧ್ಯ ವಶಕ್ಕೆ ಪಡೆದಿದ್ದಾರೆ.
ಇನ್ನು ಮಲ್ಲಿಕಾರ್ಜುನ್ ಅಪ್ಪಾಸಾಹೆಬ್ ನಿಡೋಣಿ, ಆರೋಪಿಯಾಗಿದ್ದು, ಸರಕಾರದಿಂದ ಅಥವಾ ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಮಾನ್ಯತೆ (ಲೈಸೆನ್ಸ್) ಪಡೆಯದೆ, ತನ್ನ ಫಾಯದೆ ಗೋಸ್ಕರ ದುಪ್ಪಟ್ಟು ಹಣ ತೆಗೆದುಕೊಂಡು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವಾಗ, ಖಚಿತ ಮಾಹಿತಿ ಮೇರೆಗೆ ಜಲನಗರ್ ಪೊಲೀಸರು ಜಮಖಂಡಿ ರಸ್ತೆಯಲ್ಲಿರುವ ಮಿಲನ್ ಧಾಬಾ ಮೇಲೆ ದಾಳಿ ಗೈದು, ಅನಧಿಕೃತ ಬಿಯರ ತುಂಬಿದ ಬಾಟಲಿಗಳು, ಹಾಗೂ ಸಾರಾಯಿ (ಮಧ್ಯ) ತುಂಬಿದ ಬಾಕ್ಸಗಳು ಜಪ್ತಿ ಮಾಡಿದ್ದಾರೆಂದು ಪೊಲೀಸ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.