ವಿಜಯಪುರ: ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ ಅಧಿಕಾರಿ PSI ಜ್ಯೋತಿ ರವರ ನೇತೃತ್ವದಲ್ಲಿ ಖತರ್ನಾಕ್ ಕಳ್ಳನ ಬಂಧನ.
ವಿಜಯಪುರ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ನಗರದ ಎಪಿಎಂಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಕೃಷ್ಣಾ ಗದ್ಯಾಳ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಇನ್ನು ಬಂಧಿತ ಆರೋಪಿಯಿಂದ ಮೂರು ಬೈಕ್, ಒಂದು ಟ್ರ್ಯಾಕ್ಟರ್ ಟ್ರ್ಯಾಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಎಪಿಎಂಸಿ ಪಿಎಸ್ಐ ಜ್ಯೋತಿ ನೇತೃತ್ವದಲ್ಲಿ ಆರೋಪಿಯ ಬಂಧನ ಮಾಡಲಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.