ವಿಜಯಪುರ ಬಸವನಗರದ ಖೇಮು ರಾಠೋಡ ಎಂಬುವವರ ಮಾಲೀಕತ್ವದ ಇಟ್ಟಂಗಿ ಭಟ್ಟಿಯಲ್ಲಿ 1) ಸದಾಶಿವ ಬಸಪ್ಪ ಮಾದರ 2) ಸದಾಶಿವ ಚಂದ್ರಪ್ಪ ಬಬಲಾದಿ
3) ಉಮೇಶ ಮಾಳಪ್ಪ ಮಾದರ ಎಂಬ ಕಾರ್ಮಿಕರು ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರು. ಜನವರಿ 13.01.2025 ರಂದು ಸಂಕ್ರಮಣ ಹಬ್ಬದ ನಿಮಿತ್ಯ ಎಲ್ಲ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದರು.
ದಿನಾಂಕ 15.01.2025 ರಂದು ಇಟ್ಟಂಗಿ ಭಟ್ಟಿ ಮಾಲೀಕರು ಕಾರ್ಮಿಕರಿಗೆ ಫೋನ್ ಮಾಡಿ ಕೆಲಸಕ್ಕೆ ಮರಳಿ ಬರುವಂತೆ ತಿಳಿಸಿದ್ದು, ಆಗ ಕಾರ್ಮಿಕರು ಹಬ್ಬದ ಖರ್ಚಿಗೆ 10 ಸಾವಿರ ಹಣ ಕೇಳಿದ್ದು, ಮಾಲೀಕ ಕೊಡುತ್ತೇನೆ ಅಂತಾ ಹೇಳಿ ಇಟ್ಟಂಗಿ ಭಟ್ಟಿಗೆ ಬರಲು ಹೇಳಿದ್ದು, ಅದರಂತೆ ಮೂವರು ಕಾರ್ಮಿಕರು ದಿನಾಂಕ 15.01.2025 ರಂದು ಬೆಳಿಗ್ಗೆ 09.30 ಗಂಟೆಗೆ ಇಟ್ಟಂಗಿ ಭಟ್ಟಿಗೆ ಬಂದಾಗ ಮಾಲೀಕ ಖೇಮು ರಾಠೋಡ, ಆತನ ಮಗ ರೋಹನ ರಾಠೋಡ ಹಾಗೂ ಇನ್ನೂ ಕೆಲವು ಜನರು ಸೇರಿ ಕಾರ್ಮಿಕರನ್ನು ರೂಮ್ನಲ್ಲಿ ಕೈ ಕಾಲು ಕಟ್ಟಿ ಹಾಕಿ, ಪ್ಲಾಸ್ಟಿಕ್ ಪೈಪ್… ಹೊಡೆದಿದ್ದರು
ಈ ಘಟನೆ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 28/2025 ಕಲಂ: 189(2), 191(2), 191(3), 126(2), 127(2), 118(1), 109(1), 352, 351(2): 190 ಬಿ.ಎನ್.ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಆರೋಪಿತರಾದ 1) ಖೇಮು ರಾಠೋಡ 2) ಸಚಿನ ಮಾನವರ 3) ವಿಶಾಲ ಜುಮನಾಳ ಮೂವರು ಆರೋಪಿತರನ್ನು ಬಂಧಿಸಲಾಗಿರುತ್ತದೆ. ಇನ್ನೂಳಿದ ಆರೋಪಿತರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ. ವಿಜಯಪುರ ಪೊಲೀಸ್ ಅಧೀಕ್ಷಕರು. Laxman B Nimbargi ತಿಳಿಸಿದ್ದಾರೆ

