ಬೆಂಗಳೂರು: ಫೇಕ್ ಡ್ಯಾಕ್ಯುಮೆಂಟ್ ಕ್ರಿಯೇಟ್ ಮಾಡಿ ಬ್ಯಾಂಕ್ ನಿಂದ ಕೋಟಿ ಕೋಟಿ ಲೋನ್ ಪಡೆದು ಬ್ಯಾಂಕ್ ಗೆ ಉಂಡೇ ನಾಮ ಹಾಕುತ್ತಿದ್ದ ಐನಾತಿ ಆಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯಾರದ್ದೋ ಜಾಗ ಯಾರದ್ದೋ ಹೆಸರಲ್ಲಿ ಫೇಕ್ ಡಾಕ್ಯುಮೆಂಟ್ ಕ್ರಿಯೆಟ್ ಮಾಡಿ ಬ್ಯಾಂಕ್ ಗೆ ಕೋಟಿ ಕೋಟಿ ಉಂಡೆ ನಾಮ ಹಾಕುತ್ತಿದ್ದ . ಇದೇ ರೀತಿ ಬರೋಬ್ಬರಿ 10 ವರ್ಷಗಳ ಬಳಿಕ ಖತರ್ನಾಕ್ ಖದೀಮನನ್ನು ಅಂದರ್ ಮಾಡಿದ್ದಾರೆ
ಕೃಷ್ಣಕುಮಾರ್ ಬಂಧಿತ ಆರೋಪಿಯಾಗಿದ್ದು ಈತನ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿವೆ ಪ್ರಕರಣ ದಾಖಲಾಗಿದ್ದು 2013ರಿಂದ ತಲೆ ಮರೆಸಿಕೊಂಡಿದ್ದ ಖತರ್ನಾಕ್ ಕೃಷ್ಣಕುಮಾರ್
ಸುಮಾರು 15 ಕೋಟಿಗೂ ಹೆಚ್ಚು ಲೋನ್ ಪಡೆದು ವಂಚನೆ ಮಾಡಿರುವ ಕೃಷ್ಣ ಕುಮಾರ್ ಶೇಷಾದ್ರಿಪುರಂ ಪೊಲೀಸರಿಂದ ಕೃಷ್ಣಕುಮಾರ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.