ಉತ್ತರ ಪ್ರದೇಶ: ಇತ್ತೀಚೆಗೆ ದೇಶದಲ್ಲಿ ಪಾಕಿಸ್ತಾನ ಗುಪ್ತಚರ ಇಲಾಖೆ ISI ಜೊತೆ ಲಿಂಕ್ ಇರೋ ಕೇಸ್ಗಳು ಬೆಳಕಿಗೆ ಬರ್ತಿವೆ. ಇದೀಗ ISI ಜೊತೆ ಸಂಪರ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಉತ್ತರ ಪ್ರದೇಶದಲ್ಲಿ ಅರೆಸ್ಟ್ ಮಾಡಲಾಗಿದೆ. UP ಮೂಲದ 36 ವರ್ಷದ ರಿಯಾಜು಼ದ್ದಿನ್ ಹಾಗೂ ಪಂಜಾಬ್ ಮೂಲದ 25 ವರ್ಷದ ಅಮೃತ್ ಗಿಲ್ ಅಲಿಯಾಸ್ ಅಮೃತ್ ಪಾಲ್ ಭಯೋತ್ಪಾದಕ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಈ ಇಬ್ಬರು ISIನಿಂದ ಹಣ ಪಡೆದು ಭಾರತೀಯ ಸೇನೆ ಕುರಿತ ಸೆನ್ಸಿಟಿವ್ ಹಾಗೂ ಗೌಪ್ಯ ಮಾಹಿತಿಗಳನ್ನ ಶೇರ್ ಮಾಡ್ತಿದ್ರು ಅಂತ ತನಿಖೆ ವೇಳೆ ತಿಳಿದು ಬಂದಿದೆ. ರಿಯಾಜುದ್ದಿನ್ ಬ್ಯಾಂಕ್ ಅಕೌಂಟ್ಗೆ ಕಳೆದ ವರ್ಷ 70 ಲಕ್ಷ ಹಣ ಡೆಪಾಸಿಟ್ ಆಗಿದ್ದು, ಆನಂತರ ಇತರರಿಗೆ ಹಂಚಿಕೆ ಆಗಿರೋದು ಗೊತ್ತಾಗಿದೆ. ಇದೇ ಜಾಡು ಹಿಡಿದ ಪೊಲೀಸರಿಗೆ ಇನ್ನೂ ಹಲವರು ಇದ್ರಲ್ಲಿ ಭಾಗಿಯಾಗಿರೋದು ಗೊತ್ತಾಗಿದ್ದು, ಎಲ್ಲರ ಮೇಲೂ ಕೇಸ್ ದಾಖಲಾಗಿದೆ.