ವಿಜಯಪುರ ನಗರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಮನೆ ಕಳ್ಳತನ ಹಾಗೂ ಮೋಸ ಮಾಡಿ ನಕಲಿ ಬಂಗಾರದ ನಾಣ್ಯಗಳನ್ನು ಕೊಟ್ಟು ಹಣ ತೆಗೆದುಕೊಂಡ ಮೋಸಮಾಡುವುತಿರುವ ಪ್ರಕರಣ ದಿನೆ ದಿನೆ ಜಾಸ್ತಿಯಾಗುತ್ತಿದ್ದು ಜಿಲ್ಲಾ ಪೊಲೀಸ್ ವಿಜಯಪುರ ಲಕ್ಷ್ಮಣ ನಿಂಬರಗಿ ಪೊಲೀಸ್ ಅಧೀಕ್ಷಕರು, ವಿಜಯಪುರ ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ, ಹಾಗೂ ರಾಮನಗೌಡ ಹಟ್ಟಿ, ವಿಜಯಪುರ ಜಿಲ್ಲೆ, ಹಾಗೂ ಪೊಲೀಸ್ ಉಪ-ಅಧೀಕ್ಷಕರು ಬಸವರಾಜ ಯಲಿಗಾರ, ವಿಜಯಪುರ ನಗರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಮಲ್ಲಯ್ಯ ಮಠಪತಿ, CPI ಗೋಲಗುಮ್ಮಜ ವೃತ್ತ, ವಿಜಯಪುರ ರವರ ನೇತೃತ್ವದಲ್ಲಿ ಸೀತಾರಾಮ ಲಮಾಣಿ, PSI (ಕಾ&ಸು), ಪ್ರೇಮಾ ಕುಚಬಾಳ PSI ಆದರ್ಶನಗರ ಪೊಲೀಸ್ ಠಾಣೆ. ಜ್ಯೋತಿ ಖೋತ, PSI (ಕಾ&ಸು) ಎ.ಪಿ.ಎಮ್.ಸಿ ಪೊಲೀಸ್ ಠಾಣೆ. ಡಿ ಎಮ್ ಸಂಗಾಪೂರ, PSI (ಕಾ&ಸು), ಸಿ ಆರ್ ಸಾಗರ, PSI ಜಲನಗರ ಪೊಲೀಸ್ ಠಾಣೆ ಹಾಗೂ ಎಂ ಡಿ ಘೋರಿ, PSI (ಕಾ&ಸು), ಗೋಲಗುಮ್ಮಜ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರನ್ನು ಒಳಗೊಂಡ ಒಂದು ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು.
ತನಿಖಾ ತಂಡವು ಖಚಿತ ಮಾಹಿತಿಯನ್ನು ಕಲೆಹಾಕಿ ಕಾನೂನು ಸಂಘರ್ಷಕ್ಕೊಳಪಟ್ಟ ಒಬ್ಬ ಬಾಲಕ ಸೇರಿದಂತೆ ಒಟ್ಟು 14 ಜನ ಆರೋಪಿತರನ್ನು ದಸ್ತಗಿರಿ ಮಾಡಿ ವಿಜಯಪುರ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 12 ಸ್ವತ್ತಿನ ಪ್ರಕರಣಗಳಲ್ಲಿ ಒಟ್ಟು- 271 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ನಗದು ಹಣ-30,00,000/- ರೂಪಾಯಿ ಹಾಗೂ ವಿವಿಧ ಕಂಪನಿಯ 04 ಮೋಟರ ಸೈಕಲಗಳು, ಒಂದು T&H 210 ಕಂಪನಿಯ ಹಿಟ್ಯಾಚ್ BREAKER, ಒಂದು VOLTAS COMPANY AC ಈ ರೀತಿಯಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಹೀಗೆ ಒಟ್ಟು 67,79,500/- ರೂ ಕಿಮ್ಮತ್ತಿನ ವಸ್ತುಗಳನ್ನು ಜಪ್ತ ಪಡಿಸಿಕೊಂಡು, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ & ಸಿಬ್ಬಂದಿಯವರ ಕರ್ತವ್ಯವನ್ನು ಶ್ಲಾಘಿಸಲಾಗಿದೆ.
ಮನೆ ಕಳ್ಳತನ ಪತ್ತೆ ಮಾಡಿದ ಪ್ರಕರಣಗಳ ಮಾಹಿತಿ
1) ಜಲನಗರ ಪೊಲೀಸ್ ಠಾಣೆ ಗುನ್ನೆ ನಂ-107/2024 ಕಲಂ 331 (3) 305 ಬಿಎನ್ಎಸ್-2023
ಪ್ರಕರಣದಲ್ಲಿ ಗುನ್ನೆ ಮಾಡಿದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಂದ ಒಟ್ಟು- 51 ಗ್ರಾಂ ತೂಕದ ಬಂಗಾರದ ಸಾಮಾನುಗಳು ಆ:ಕಿ 4,80,000/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
2) ಆದರ್ಶನಗರ ಪೊಲೀಸ್ ಠಾಣೆ ಗುನ್ನೆ ನಂ-121/2024 600 331(3), 305 222-2023
ಆರೋಪಿತನಾದ ಮುರ್ತುಜಸಾಬ @ ಬಾಬಾ ಮೊಹೃದಆದಿಲಶಾಹ ಖಾನ, 21 ವರ್ಷ. ಉದ್ಯೋಗ ಕೂಲಿ ಸಾ॥ ರಾಯಲ್ ಮ್ಯಾರೇಜ ಹಾಲ್ ಹತ್ತಿರ, ಗ್ಯಾಂಗ್ ಬಾವಡಿ ವಿಜಯಪುರ, ಈತನಿಂದ ಒಟ್ಟು- 45 ಗ್ರಾಂ ತೂಕದ ಬಂಗಾರದ ಸಾಮಾನುಗಳನ್ನು ಮತ್ತು 03 ಮೋಟರ ಸೈಕಲಗಳು ಒಟ್ಟು ಸೇರಿ 5.10.000/- ರೂ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
3) ಎಪಿಎಮ್ ಸಿ ಪೊಲೀಸ್ ಠಾಣೆ ಗುನ್ನೆ ನಂ-81/2024 & 92/2024 ಕಲಂ: 331(3)305 ಬಿಎನ್ಎಸ್ 2023
ಆರೋಪಿತನಾದ ಮೋದಿನಸಾಬ @ ಮೋದ್ಯಾ ಸರ್ದಾರಸಾಬ ವಾಲೀಕಾರ ಸಾ॥ ಹಾವಿನಾಳ, ತಾ। ಚಡಚಣ ವಿಜಯಪುರ ಜಿಲ್ಲೆ. ಈತನ ಕಡೆಯಿಂದ 02 ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು- 172 ಗ್ರಾಂ ಬಂಗಾರದ ಆಭರಣಗಳನ್ನು [ಅ ಕಿ-10.32,000/-] ವಶಪಡಿಸಿಕೊಂಡಿದ್ದಾರೆ
ನಕಲಿ ಬಂಗಾರದ ನಾಣ್ಯಗಳನ್ನು ತೋರಿಸಿ ಹಣ ದೋಚಿದ ಪ್ರಕರಣಗಳ ವಿವರ.
1) ಗೋಲಗುಮ್ಮಜ್ ಪೊಲೀಸ್ ಠಾಣೆ ಗುನ್ನೆ ನಂ-117/2024 ಕಲಂ 318(4), 316(2) ಬಿಎನ್ಎಸ್-2023
ಆರೋಪಿತನಾದ ಕೆ.ಮುನೇಶ್ ರಮೇಶ ಕೆ.ಹನುಮಂತಪ್ಪ, 26 ವರ್ಷ, ಸಾ॥ ಗರಗ ತಾ॥ ಹೊಸಪೇಟೆ ಜಿ ವಿಜಯನಗರ, ಈತನ ಕಡೆಯಿಂದ ಒಟ್ಟು 10,00,000/- ರೂಪಾಯಿಗಳನ್ನು ಹಾಗೂ ಪಿರ್ಯಾದಿಯ ಮೊಬೈಲ್ ಪೋನ್ನ್ನು ವಶಪಡಿಸಿಕೊಂಡಿದ್ದಾರೆ
*2) ಆದರ್ಶನಗರ ಪೊಲೀಸ್ ಠಾಣೆ ಗುನ್ನೆ ನಂ-107/2024 ಕಲಂ 331(3), 305 ಬಿಎನ್ಎಸ್-2023
ಆರೋಪಿತನಾದ ಮುದಸ್ಸರ್ ಉರ್ಫ ಮುಖ್ಯಾ ಅಬ್ದುಲಹಮೀದ ಉರ್ಫ ಅಬ್ದುಲ್ ಅಹಮದ ಪಠಾಣ 30 ವರ್ಷ, ಸಾ:ಶಕ್ತಿ ನಗರ ದರ್ಗಾರೋಡ ವಿಜಯಪುರ, ಈತನ ಕಡೆಯಿಂದ ಒಟ್ಟು- 03 ಗ್ರಾಂ ಬಂಗಾರದ ಕಿವಿಯೊಲೆ ಹಾಗೂ 2500/-ಹಣ ಹೀಗೆ ಒಟ್ಟು-14,500/- ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದಾರೆ
3) ಆದರ್ಶನಗರ ಪೊಲೀಸ್ ಠಾಣೆ ಗುನ್ನೆ ನಂ: 118/2024 ಕಲಂ: 303[2] 305 ಬಿಎನ್ ಎಸ್-2023
ಆರೋಪಿತನಾದ ಆಶೀಫ್ ಉಸ್ಥಾನ ಜಮಾದಾರ 33 ವರ್ಷ, ಸಾ: ಶಾಲಿ ಹುಸೇನಿ ನಗರ ವಿಜಯಪುರ. ಈತನ ಕಡೆಯಿಂದ VOLTAS COMPANY AC ಮತ್ತು AC OUT DOOR UNIT-02 ಹೀಗೆ ಒಟ್ಟು-40,000/- ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದಾರೆ
4] ಆದರ್ಶನಗರ ಪೊಲೀಸ್ ಠಾಣೆ ಗುನ್ನಾ ನಂ: 105/2024 ಕಲಂ: 303[2] ಬಿಎನ್ಎಸ್-2023
ಆರೋಪಿತರಾದ-1) ಶೆಟ್ಟಿ @ ಸತೀಶ ಗೆಮು ರಾಠೋಡ, 51 ವರ್ಷ, ಉದ್ಯೋಗ- ಹೋಟೆಲ, ಸಾ॥ ಆಕುಂಟೆ ನಗರ ವಿಜಯಪುರ, 2) ಮಾರುತಿ ಶಂಕರ ರಾಠೋಡ, 29 ವರ್ಷ, ಸಾ॥ ಅಕುಂಟಿ ನಗರ ವಿಜಯಪುರ 3] ಮೌಲಾಲಿ ಹುಸೇನಸಾಬ ಮಮದಾಪೂರ, 45 ವರ್ಷ, ಸಾ॥ ಜೈನ್ ಮಂದಿರ ಹತ್ತಿರ ವಿಜಯಪುರ, ಇವರ ಕಡೆಯಿಂದ T&H-210 ಕಂಪನಿಯ ಹಿಟ್ಯಾಚ್ BREAKER ಆ:ಕಿ 4,50,000/- ಕಿಮ್ಮತ್ತಿನದ್ದನ್ನು ವಶಪಡಿಸಿಕೊಂಡಿದ್ದಾರೆ
5) ಎಪಿಎಮ್ ಸಿ ಪೊಲೀಸ್ ಠಾಣೆ ಗುನ್ನೆ ನಂ-107/2024 ಕಲಂ- 303(2) ಬಿಎನ್ ಎಸ್-2023
ಆರೋಪಿತನಾದ ರುದ್ರೇಶ ಗಂಗಪ್ಪ ಬಡಿಗೇರ, 42 ವರ್ಷ, ಸಾ॥ ಇಂಡಿ ರಸ್ತೆ ಬಂಬಾಳ ಅಗಸಿ ವಿಜಯಪುರ. ಈತನ ಕಡೆಯಿಂದ ಒಟ್ಟು-1,65,000/-ರೂ ಕಿಮ್ಮತಿನ ಬೆಲೆಬಾಳುವ ಸಾಮಾನುಗಳು ವಶಪಡಿಸಿಕೊಂಡಿದ್ದಾರೆ