ವಿಜಯಪುರ: ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ಜಿಲ್ಲಾ ಪೊಲೀಸ ಇಲಾಖೆಯಿಂದ ಜಾಗೃತಿ ಜಾಥಾ.
ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ಜಿಲ್ಲಾ ಪೊಲೀಸ ಇಲಾಖೆಯಿಂದ ವಿಜಯಪುರ ನಗರದಲ್ಲಿ ಪೊಲೀಸರು ಜನತೆಯಲ್ಲಿ ಜಾಗೃತಿ ಮೂಡಿಸಿದರು. ಎಸ್ಪಿ ಋಷಿಕೇಶ್ ಸೋನವಾಣೆ ನೇತೃತ್ವದಲ್ಲಿ ಜಿಲ್ಲಾ ಪೊಲೀಸ ಸಿಬ್ಬಂದಿಗಳು ನಗರದಾದ್ಯಂತ ವಾಕ್ ಅಂಡ್ ರನ್ ಮೂಲಕ ಮಾದಕ ದ್ರವ್ಯಗಳ ಮಾರಾಟ ಹಾಗೂ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು.
ಈ ವೇಳೆ ಎಸ್ಪಿ ಋಷಿಕೇಶ್ ಮಾತನಾಡಿ,
ಪೊಲೀಸರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಅಲ್ಲದೇ, ಪೊಲೀಸರು ತಮ್ಮ ಕರ್ತವ್ಯ ಮರೆಯಬಾರದು. ರಾತ್ರಿ ವೇಳೆ ಸರಿಯಾಗಿ ಪೊಲೀಸರು ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂಡುಬಂದಿದೆ. ಅದಕ್ಕಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.