ಉತ್ತರ ಕನ್ನಡ: ತಲೆ ಒಡೆದು ಅಪರಿಚಿತ ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಕೊರ್ಲಕಟ್ಟಾ ಮಾಳಂಜಿ ರಸ್ತೆಯ ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಸುಮಾರು 50 ರಿಂದ 55 ವರ್ಷ ವಯಸ್ಸಿನ ವ್ಯಕ್ತಿಯ ರಕ್ತಸಿಕ್ತ ಶವ ದೊರೆತಿದೆ.
ದೇಹದ ಮೇಲೆ ಎರಡು ಗೋಣಿ ಚೀಲ ಹಾಕಲಾಗಿದ್ದು, ಅದರ ಮೇಲೆ ಸೊಪ್ಪು ಹಾಕಿರುವುದು ಕಂಡು ಬಂದಿದೆ. ಚೀಲದಲ್ಲಿ ಶವ ತುಂಬಿ ಕಾಡಿನಲ್ಲಿ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ. ಶವದ ಎಡ ಕಾಲಿನ ಎರಡನೇ ಬೆರಳಿನಲ್ಲಿ ಬೆಳ್ಳಿಯ ಉಂಗುರವಿದೆ. ಗುರುವಾರ ಮಧ್ಯರಾತ್ರಿ ಸುಮಾರಿಗೆ ಕೊಲೆ ನಡೆದಿರಬಹುದು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಶುಕ್ರವಾರ ಬೆಳಿಗ್ಗೆ ಹಾಲು ಹಾಕುವ ವ್ಯಕ್ತಿ ಘಟನೆ ತಿಳಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮೃತ ವ್ಯಕ್ತಿ ಸ್ಥಳೀಯರಿಗೆ ಪರಿಚಯವಿಲ್ಲ. ಬೇರೆ ಊರಿನವರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.