ಮೈಸೂರು: ಕೋಟಿ ಮೌಲ್ಯದ ಕಿಂಗ್ ಫಿಶರ್ ಬಿಯರ್ಗಳನ್ನು(Beer) ಅಬಕಾರಿ ಇಲಾಖೆ ವಶಕ್ಕೆ ಪಡೆದುಕೊಂಡಿದ್ದಾರೆ. ಮೈಸೂರಿನ ನಂಜನಗೂಡಿನ ಘಟಕದಲ್ಲಿ ತಯಾರಿಸಲಾಗಿದ್ದ ಕಿಂಗ್ ಫಿಷರ್ ಬಿಯರ್ನಲ್ಲಿ ಅಪಾಯಕಾರಿ ಅಂಶ ಪತ್ತೆ ಹಿನ್ನೆಲೆ ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟಾ ಲ್ಯಾಗರ್ ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಯುನೈಟೆಡ್ ಬ್ರಿವರಿಸಿಸ್ ಕಂಪನಿ ತಯಾರಿಸಿದ್ದ ಬಿಯರ್ ಇದಾಗಿದೆ. ಮೈಸೂರು ಗ್ರಾಮಾಂತರ ಅಬಕಾರಿ ಇಲಾಖೆಯ ಉಪ ಆಯುಕ್ತ ಎ.ರವಿಶಂಕರ್ ಮಾಹಿತಿ ನೀಡಿದ್ದಾರೆ. 7e ಮತ್ತು 7c ದಿನಾಂಕ 15-07-23 ರಂದು ಬಾಟಿಲಿಂಗ್ ಆದ ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಬಿಯರ್ ಸ್ಯಾಂಪಲ್ ಕೆಮಿಕಲ್ ಲ್ಯಾಬ್ ಕಳುಹಿಸಲಾಗಿತ್ತು. 2-08-2023 ಕೆಮಿಕಲ್ ವರದಿ ಬಂದಿದೆ. ವರದಿಯಲ್ಲಿ ಅನ್ ಫಿಟ್ ಫಾರ್ ಹ್ಯುಮನ್ ಕನ್ಸಂಪ್ಪನ್ ಎಂದು ವರದಿ ಬಂದಿದೆ. ಒಟ್ಟು 78,678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಎಲ್ಲಾ ಬಾಕ್ಸ್ ಗಳನ್ನ ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಕಂಪನಿಯ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ಕೆಲ ಡಿಪೋದಿಂದ ಅಂಗಡಿಗಳಿಗು ವಿತರಣೆಯಾಗಿತ್ತು. ರಿಟೈಲ್ ನಲ್ಲೂ ಸೇಲ್ ಆಗದಂತೆ ತಡೆಹಿಡಿಯಲಾಗಿದೆ. ಇನ್ ಹೌಸ್ ಕೆಮಿಸ್ಟ್ ಅವರು ಕೊಟ್ಟಿರುವ ರಿಪೋರ್ಟ್(Report) ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮನುಷ್ಯರು ಕುಡಿಯಲು ಯೋಗ್ಯವಲ್ಲ ಎಂದು ಬಂದ ವರದಿ ಆಧರಿಸಿ ದಾಳಿ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.