ಕೊಲ್ದಾರ ಗಾಣಿಗ ಅಭಿವೃದ್ಧಿ ನಿಗಮವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರುವುದರ ಜತೆಗೆ ಅನುದಾನ ಬಿಡುಗಡೆ ಆಗ್ರಹಿಸಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ವತಿಯಿಂದ ಡಿಸೆಂಬರ್ .18 ರಂದು ಬೆಳಗಾವಿ ಹೋರಾಟ ಚಲೋ ಹಮ್ಮಿಕೊಳ್ಳ ಲಾಗಿದೆ ಎಂದು ದಿಗಂಬ ರೇಶ್ವರ ಮಠದ ಯೋಗಿ ಕಲ್ಲಿನಾಥ ದೇವರು ಹಾಗೂ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ನಂದು ಗಡಗಿ ತಿಳಸಿದ್ದಾರೆ. ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಗಾಣಿಗ ಸಮುದಾಯದ ಹಕ್ಕು ಪಡೆಯಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಮುದಾಯದ ಹಕ್ಕಿಗಾಗಿ ಒತ್ತಾಯಿಸಲಾಗುವುದು. ಹಿಂದುಳಿದಿರುವ ಗಾಣಿಗ ಸಮಾಜದ ಅಭಿವೃದ್ಧಿ ನಿಗಮವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತಂದು ಶೀಘ್ರದಲ್ಲಿಯೇ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಬೇಕೆನ್ನುವುದು ನಮ್ಮ ಒತ್ತಾಸೆಯಾಗಿದೆ. ರಾಜಕೀಯ ಹಿತಾಸಕ್ತಿ ಇಟ್ಟುಕೊಂಡಿರುವ ಕೆಲ ಸಮುದಾಯದ ಮುಖಂಡರ ಮಾತುಗಳಿಗೆ ಕಿವಿಗೊಡದೆ ಸರ್ವರು ಬೆಳಗಾವಿ ಚಲೋ ಹೋರಾಟದಲ್ಲಿ ಭಾಗವಹಿಸಿಬೇಕೆಂದು ಅವರು ಕರೆ ನೀಡಿದ್ದಾರೆ. ಬೆಳಗಾವಿ ಚಲೋ ಹೋರಾಟದಲ್ಲಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ರಾಜ್ಯಾಧ್ಯಕ್ಷ ಆನಂದ.ಕೆ. ಮಂಡ್ಯ ಸಹಿತ ಅನೇಕ ನಾಯಕರು ಉಪಸ್ಥಿತರಿವರು ಎಂದು ತಿಳಿಸಿದ್ದಾರೆ.