ಬೆಂಗಳೂರು : ನಾಳೆ ನಡೆಯುವ ಬೆಂಗಳೂರು ಬಂದ್ ಗೆ ಯಾವುದೇ ರೀತಿಯಲ್ಲಿ ಅವಕಾಶವಿಲ್ಲ. ಅಲ್ಲದೆ ಇಂದು ಮಧ್ಯರಾತ್ರಿಯಿಂದ ನಾಳೆ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಯಾವುದೇ ರೀತಿಯಾದಂತಹ ಬಂದ್ ಗೆ ಅವಕಾಶ ಕೊಡಬಾರದು ಎಂದು ಆದೇಶವಿದ್ದು, ಒಂದು ವೇಳೆ ಮಾಡಿದರೆ ಯಾವುದಾದರೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಆದರೆ ಬಂದ್ ಗೆ ಆಯೋಜನೆ ಮಾಡಿರುವ ಸಂಘಟನೆಗಳೆ ಹೊಣೆ ಎಂದು ತಿಳಿಸಿದರು.
ಪ್ರತಿಭಟನೆ ವೇಳೆ ಆಹಿತಕರ ಘಟನೆ ನಡೆಯಬಾರದು. ಅದಕ್ಕಾಗಿ ನಾಳೆ ಹೆಚ್ಚು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ಘಟನೆಗೆ ಆಯೋಜಕರೆ ಹೊಣೆಯಾಗುತ್ತಾರೆ. ಒತ್ತಾಯಪೂರ್ವಕವಾಗಿ ಬಂದ್ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ಕಡೆ ತಮಿಳುನಾಡಿಗೆ ಕಾವೇರಿ ನೀರು ಹರೀಸದಂತೆ ನಾಳೆ ಬೆಂಗಳೂರು ಬಂದ್ ಗೆ ರೈತ ಪರ ಸಂಘಟನೆಗಳು ಹಾಗೂ ಕನ್ನಡ ಪರ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಆದರೆ ಬೆಂಗಳೂರು ನಗರ ಪೊಲೀಸ್ ಆಯುಕ್ತರದ ಬಿ ದಯಾನಂದ ಅವರು ನಾಳಿನ ಬಂದಿಗೆ ಯಾವುದೇ ರೀತಿಯಾದ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಗೆ ಈ ವೇಳೆ ಯಾವುದೇ ರೀತಿ ತೊಂದರೆ ಆಗದಂತೆ ಕಟ್ಟೇಚ್ಚರ ವಹಿಸಿದ್ದೇವೆ. ಒತ್ತಾಯ ಪೂರಕವಾಗಿ ಬಂದ್ ಮಾಡಿದರೆ ಅಂತವರು ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳುತ್ತೇವೆ.ನಾಳೆ ಬಂದ್ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದೆ. ಬೆಂಗಳೂರು ನಗರದಲ್ಲಿ ಕಟ್ಟನಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮದ್ಯ ರಾತ್ರಿಯಿಂದ ನಾಳೆಯಿಂದ ಮಧ್ಯರಾತ್ರಿಯವರಿಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬೆಂಗಳೂರಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 60 ಕೆಎಸ್ಆರ್ಪಿ 40 ಸಿ ಎ ಆರ್ ತುಕಡಿ ನಿಯೋಜನೆ ಮಾಡಿದ್ದೇವೆ ಹೋಂ ಗಾರ್ಡ್ ಸಿಬ್ಬಂದಿಗಳು, ಒಟ್ಟಾರೆಯಾಗಿ ಹೇಳುವುದಾದರೆ ಈ ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಗತ್ಯವಿದ್ದಲ್ಲಿ ತಮಿಳುನಾಡು ಸಾರಿಗೆ ಬಸ್ ಗಳಿಗೆ ಭದ್ರತೆಯನ್ನು ಒದಗಿಸುತ್ತೇವೆ. ಎಂದು ಅವರು ತಿಳಿಸಿದರು.