ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಮಟ್ಕಾ ಬೆಟ್ಟಿಂಗ್ ಆಡುವುದು
ಇದರಲ್ಲಿ ಮೋಸಹೋಗುವ ಜನರೇ ಹೆಚ್ಚು ಈ ಮಟ್ಕಾ ಬೆಟ್ಟಿಂಗ್ ದಂದೆಯಲ್ಲಿ ನೀವು ಕಟ್ಟುವ
1 ರೂಪಾಯಿಗೆ 80 ನೀಡುವ ಕರಾರಿನ ಮೇಲೆ ಜನರಿಗೆ ಆಮಿಷ ತೋರಿಸಿ ಮಟಕಾ ಚೀಟಿ ನಡೆಸುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕುಮಾರ್ ಬಾಬು ಚೌಹಾನ್ ಎಂಬ ವ್ಯಕ್ತಿ ಮಟಕಾ ಚೀಟಿ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ
ಮುದ್ದೇಬಿಹಾಳ ಪೊಲೀಸರು ನಿನ್ನೆ ದಾಳಿ ಮಾಡಿ ವ್ಯಕ್ತಿಯನ್ನು ಬಂಧಿಸಿ, ಆತನಿಂದ 350 ರೂಪಾಯಿ ನಗದು ಮಟಕಾ ಚೀಟಿ ವಶಪಡಿಸಿಕೊಂಡಿದ್ದಾರೆ. ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.