ಬೆಳಗಾವಿ : ಜಿಲ್ಲೆಗೆ ನೂತನ ಎಸ್ಪಿ ಆಗಿ ಭೀಮಾಶಂಕರ ಗುಳೇದ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ 14 ತಿಂಗಳು ಎಸ್ಪಿ ಆಗಿ ಸೇವೆ ಡಾ. ಸಂಜೀವ್ ಪಾಟೀಲ ಸೇವೆ ಸಲ್ಲಿಸಿದ್ದು ಇದೀಗ ಡಾ. ಸಂಜೀವ್ ಪಾಟೀಲ ಬೆಂಗಳೂರು ವೈಟ್ ಫಿಲ್ಡ್ ಡಿಸಿಪಿ ಆಗಿ ವರ್ಗಾವಣೆ ಆಗಿದ್ದಾರೆ. ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಭೀಮಾಶಂಕರ ಗುಳೇದ ಅವರಿಗೆ ಡಾ. ಸಂಜೀವ್ ಪಾಟೀಲ ಅವರು ಹಸ್ತಾಂತರ ಮಾಡಿದರು. ಫೋನ್ ಇನ್ ಕಾರ್ಯಕ್ರಮದ ಮೂಲಕ ಬೆಳಗಾವಿ ಜಿಲ್ಲೆಯ ಜನರ ಮನ ಗೆದ್ದಿದ್ದ ಡಾ. ಸಂಜೀವ್ ಹಿರೇಕೋಡಿಯ ಜೈನ ಮುನಿ ಹತ್ಯೆ ಪ್ರಕರಣ ನಾಲ್ಕೇ ಗಂಟೆಗಳಲ್ಲಿ ಬೇಧಿಸಿದ್ದರು. ಇದಕ್ಕೂ ಮೊದಲು ನೂತನ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಗಳು ಗೌರವ ನಮನ ಸಲ್ಲಿಸಿದರು.