ಮಂಗಳೂರು : ನಗರದ ಪಡೀಲ್ ಅಂಡರ್ ಪಾಸ್ನಲ್ಲಿ ಗುರುವಾರ ನಡೆದ ರಸ್ತೆ ಅಫಘಾತದಲ್ಲಿ ಯುವಕನೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿರುವುದಾಗಿ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತಪಟ್ಟ ಯುವಕನನ್ನು ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭುವನ್ ರಾಜ್ (18) ಎಂದು ಗುರುತಿಸಲಾಗಿದೆ. ಗಾಡ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ನಲ್ಲಿ ಮೂರು ಮಂದಿ ಸವಾರಿ ಮಾಡಿದ್ದು, ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿದ ಪರಿಣಾಮ ಅಂಡರ್ಪಾಸ್ನ ಗೋಡೆಗೆ ಬೈಕ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.