ವಿಜಯಪುರ : ಮಹಾನಗರ ಪಾಲಿಕೆ ಆಡಳಿತ ಕಾಂಗ್ರೆಸ್ ವಶವಾಗಿದೆ. ಮಾಹೇಜಬಿನ್ ಅಬ್ದುಲ್ ರಜಾಕ್ ಹೊರ್ತಿ ಮೇಯರ್ ಹಾಗೂ ಉಪ ಮೇಯರ್ ಆಗಿ ದಿನೇಶ್ ಹಳ್ಳಿ ಆಯ್ಕೆ ಯಾಗಿದ್ದಾರೆ.
2022 ಅಕ್ಟೋಬರ್ ನಲ್ಲಿ ವಿಜಯಪುರ ನಗರದ ಮಹಾನಗಪಾಲಿಕೆಯ ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಆದರೆ 15 ತಿಂಗಳುಗಳು ಕಳೆದರೂ
ಸಹ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಯಾಗಿರಲಿಲ್ಲ.
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣೆ ತಡೆಯಬೇಕೆಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಚುನಾವಣೆ ಬಹಿಷ್ಕರಿಸಿ ಹೊರನಡೆದರೆ ಕಾಂಗ್ರೆಸ್ ಸದಸ್ಯರು ಗೆಲುವಿನ ಸಂಭ್ರಮದಲ್ಲಿ ತೇಲಾಡಿದರು.
ಬಿಜೆಪಿ ಸದಸ್ಯರು ಚುನಾವಣೆ ಬಹಿಷ್ಕರಿಸಿ ಹೊರ ನಡೆದರಿಂದ,
ಕಾಂಗ್ರೆಸ್ ನ ಮೇಯರ್ ಹಾಗೂ ಉಪಮೇಯರ್ ಅವಿರೋಧವಾಗಿ ಆಯ್ಕೆ ಯಾದರು.