ಕಲಬುರಗಿ : ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕೂಡಿಗನೂರ ಗ್ರಾಮದ ರವಿ ಬಿರಾದಾರ ಅವರಿಗೆ ಸೇರಿದ ಸುಮಾರು ಎರಡು ಎಕರೆ ಕಬ್ಬು ವಿದ್ಯುತ್ ಶಾಟ್ ಸರ್ಕೂಟ್ ನಿಂದ ಸುಟ್ಟು ಹೋಗಿದೆ.

ಗ್ರಾಮಸ್ಥರು ಮತ್ತು ಅಗ್ನಿ ಶಾಮಕದವರ ಫಲದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು ಮೂವತ್ತೈದು ವರ್ಷಗಳಿಗಿಂತ ಹಳೆಯ ಕಂಬಗಳು ಜೋತು ಬಿದ್ದ ವಿದ್ಯುತ್ ತಂತಿ ಬದಲಿಸದೇ ಇದ್ದಿದ್ದು ಅವಘಡಕ್ಕೆ ಕಾರಣವಾಗಿದೆ. ಕಂಬ ಬದಲಿಸಲು ಜೆಸ್ಕಾಂಗೆ ತುಂಬಾ ಸಲ ದೂರು ನೀಡಿದ್ದರು ಸಹ ಅವರು ಬಂದು ದುರಸ್ತಿ ಮಾಡದಿರುವದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

