ಬಾಗಲಕೋಟೆ : 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ) ನಡೆದಿದೆ. ರಾಹುಲ್ ವಿಠ್ಠಲ (15) ಎಂಬಾತ ಹೃದಯಾಘಾತದಿಂದ ಸಾವಿಗೀಡಾದ ವಿದ್ಯಾರ್ಥಿಯಾಗಿದ್ದಾನೆ.
ಮೃತ ಜಮಖಂಡಿ ತಾಲೂಕಿನ ಇನಾಂ ಹಂಚಿನಾಳ ಗ್ರಾಮದ ನಿವಾಸಿಯಾಗಿದ್ದಾನೆ. ಅರ್ಧ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದ ವೇಳೆ ರಾಹುಲ್ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಜಮಖಂಡಿ ನಗರದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ರಾಹುಲ್ ಕೊನೆಯುಸಿರೆಳೆದಿದ್ದಾನೆ.
ಹುಲ್ಯಾಳ ಗ್ರಾಮದ ಖಾಸಗಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ರಾಹುಲ್ ಸಾವಿನ ಬಗ್ಗೆ ಶಿಕ್ಷಕರು ಪಾಲಕರಿಗೆ ತಿಳಿಸಿದ್ದಾರೆ. ವಿದ್ಯಾರ್ಥಿ ಸಾವಿನ ಸುದ್ದಿ ತಿಳಿದು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ. ಮೃತ ವಿಠ್ಠಲಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ತಿಳಿದು ಬಂದಿದೆ.