ಬೆಂಗಳೂರು:KSDL ಒಂದೇ ಬಾರಿಗೆ 21 ಉತ್ಪನ್ನಗಳ ಬಿಡುಗಡೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ ಬೀ ಪಾಟೀಲ್. ಶತಮಾನಕ್ಕೂ ಮೀರಿದ ಇತಿಹಾಸವುಳ್ಳ ರಾಜ್ಯದ ಹೆಮ್ಮೆಯ KSDL ಪರಂಪರೆಯನ್ನು ಪುನರುಜ್ಜೀವನಗೊಳಿಸುವುದು ಸೇರಿದಂತೆ ಹೊಸ, ಹೊಸ ಉತ್ಪನ್ನಗಳನ್ನು ಪರಿಚಯಿಸುವ ನಮ್ಮ ಪ್ರಯತ್ನ ಸಾಕಾರವಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರು 21 ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ ಎಂದು ಸಚಿವ ಎಂ ಬೀ ಪಾಟೀಲ್ ಹೇಳಿದರು.
10 ಬಗೆಯ ಪ್ರೀಮಿಯಂ ಶ್ರೇಣಿಯ ಸಾಬೂನು, 3 ತರಹದ ಶವರ್ ಜಲ್, 6 ಬಗೆಯ ಸೋಪ್ ಕಿಟ್, ಹ್ಯಾಂಡ್ ವಾಶ್, ಕುಡಿಯುವ ನೀರು ಸೇರಿದಂತೆ ಒಟ್ಟು 21 ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ್ದಾರೆ. ಇವುಗಳ ಮೂಲಕ ಸಂಸ್ಥೆ ಅಧಿಕವಾಗಿ ರೂ. 1,000 ಕೋಟಿ ವಹಿವಾಟನ್ನು ನಿರೀಕ್ಷಿಸುತ್ತಿದೆ. ದೇಶ-ವಿದೇಶಗಳಲ್ಲೂ KSDL ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು #ನಮ್ಮಸರ್ಕಾರ ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ.