ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಬಾಂಬ್ ನಿಷ್ಕ್ರೀಯ ಪತ್ತೆ ಮತ್ತು ದಳದ ಮೊಬೈಲ್ ಲ್ಯಾಬ್, ಎಫ್ಎಸ್ಎಲ್ ಮೊಬೈಲ್ ಲ್ಯಾಬ್ ವಾಹನ, ಕಂಟ್ರೋಲ್ ಸೆಂಟರ್ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಇದೇ ವೇಳೆ ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಪೊಲೀಸ್ ಇಲಾಖೆಗೆ ಸಿಎಂ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ರಾಜ್ಯದದಲ್ಲಿ ಭವ್ಯವಾದ ಸುಸಜ್ಜಿತ ಸುವರ್ಣ ಪೊಲೀಸ್ ಭವನ ನಿರ್ಮಾಣಕ್ಕೆ ಬಜೆಟ್ನಲ್ಲಿ ಅನುದಾನ ನಿಗದಿ, ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ, ವೈದ್ಯಕೀಯ ವೆಚ್ಚ 1000 ದಿಂದ 1500 ರೂ.ಗೆ ಹೆಚ್ಚಿಸಲಾಗುವುದು, CEN ಠಾಣಾಧಿಕಾರಿಗಳ ಹುದ್ದೆಯನ್ನು ACP ಮತ್ತು DCP ಮಟ್ಟಕ್ಕೆ ಉನ್ನತೀಕರಣ, ಬೆಂಗಳೂರು ನಗರದಲ್ಲಿ 8 ಅಡಿಷನಲ್ DCP ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಜನೆ ಹಾಗೂ ರಾಜ್ಯವನ್ನು ಡ್ರಗ್ ಮುಕ್ತ ಗೊಳಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.