ಬಳ್ಳಾರಿ: ಕಾಲೇಜು ವಿದ್ಯಾರ್ಥಿನಿಯನ್ನ ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಿರುವ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ನಾಲ್ವರು ಯುವಕರು ಕಿಡ್ನಾಪ್ ಮಾಡಿದ್ದು, ಕಾಲೇಜಿನಿಂದ ಆಟೋದಲ್ಲಿ ಅಪಹರಣ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯುವತಿಯ ಸ್ನೇಹಿತನೇ ಕೃತ್ಯ ಎಸಗಿದ್ದು, ಘಟನೆ ಸಂಬಂಧ ಎ1 ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ.
ನಾಲ್ವರು ಆರೋಪಿಗಳಿಂದ ಕೃತ್ಯ…
ಬಳ್ಳಾರಿಯಿಂದ ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದ ಕಿಡಗೇಡಿಗಳು ಕೊಪ್ಪಳ ಜಿಲ್ಲೆಯ ಸಣಾಪುರ ಬಳಿಯ ಹೋಟೆಲ್ ನಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯ ಕೌಲ್ ಬಜಾರ್ ನ ನವೀನ್, ಸಾಕೀಬ್, ತನು ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾರೆ.
ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ..
ನಾಲ್ವರ ವಿರುದ್ದ ದೂರು ನೀಡಿದ ಸಂತ್ರಸ್ತ ಯುವತಿ ಬಳ್ಳಾರಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಯುವತಿ ಪರೀಕ್ಷೆ ಬರೆಯುತ್ತಿದ್ದ ಯುವತಿಯನ್ನು ಕಾಮುಕರು ಕಿಡ್ನಾಪ್ ಮಾಡಿ ಕೃತ್ಯ ಎಸಗಿದ್ದಾರೆ. ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಅಣ್ಣ ಬಂದಿರೋದಾಗಿ ಹೇಳಿ ಕಾಲೇಜಿನಿಂದ ಹೊರಗಡೆ ಕರೆಯಿಸಿದ್ದ ಆರೋಪಿಗಳು, ಹೊರಗಡೆ ಬರ್ತಿದ್ದಂತೆ ಕಿಡ್ನ್ಯಾಪ್ ಮಾಡಿ ಕೃತ್ಯ ಎಸಗಿದ್ದಾರೆ. ಅಕ್ಟೋಬರ್ 11 ರಂದು ಘಟನೆ ನಡೆದಿದೆ.
ಹೋಟೆಲ್ ಗೆ ಕರೆದುಕೊಂಡು ಹೋಗಿ ಕೃತ್ಯ…
ಪ್ರಕರಣದ ಕುರಿತಂತೆ ಮಾಧ್ಯಮಗಳಿಗೆ ಬಳ್ಳಾರಿಯಲ್ಲಿ ಎಸ್ ಪಿ ರಂಜೀತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದು, ಅಕ್ಟೋಬರ್ 11 ರಂದು ಬಿಕಾಂ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಲಾಗಿದೆ. ಪರೀಕ್ಷೆ ಬರೆಯುವಾಗ ನಿಮ್ಮ ಅಣ್ಣ ಕರೆಯುತ್ತಿದ್ದಾನೆ ಅಂತಾ ಯುವತಿಯನ್ನ ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಗೊತ್ತಿದ್ದ ಯುವಕನಾಗಿದ್ದ ಕಾರಣ ಯುವತಿ ಪರೀಕ್ಷೆ ಬಿಟ್ಟು ಕಾಲೇಜಿನಿಂದ ಹೊರ ಬಂದಿದ್ದಳಂತೆ. ಬಳಿಕ ಆಟೋದಲ್ಲಿ ಕೊಪ್ಪಳ ಜಿಲ್ಲೆಯ ಸಾಣಾಪುರ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದಾರೆ. ಹೋಟೆಲ್ ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪ್ರಕರಣ ಮೊದಲ ಅರೋಪಿ ನವೀನ್ ಬಂಧನ ಮಾಡಲಾಗಿದೆ, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ವಿವರಿಸಿದ್ದಾರೆ.