ಹುಬ್ಬಳ್ಳಿ: ಮಂಗಳವಾರ ನಡೆದ ವಿಶ್ವಕಪ್ ಕ್ರಿಕೆಟ್ ನ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ನಗದು ಸೇರಿದಂತೆ ₹2.64 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಭವಾನಿ ನಗರದ ನವೀನ್ ಜಿತೂರಿ, ಶಾಂತಿನಗರದ ಮಹಮ್ಮದ್ ಅಬ್ದುಲ್ಮಜಿ ಯರಗಟ್ಟಿ, ವಿಕಾಸ ನಗರದ ಪವನ್ ಇರಕಲ್ ಬಂಧಿತರು. ಆರೋಪಿಗಳು ನಗರದ ಡಾಕಪ್ಪ ಸರ್ಕಲ್ ನಲ್ಲಿ ಬೆಟ್ಟಿಂಗ್ ನಲ್ಲಿ ನಡೆಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ವೇಳೆ ಪ್ರಕರಣದ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.