ಬೆಂಗಳೂರು : ನಗರದ ಚಾಮರಾಜಪೇಟೆ ಅನಂತಪುರದ ಬಳಿ ಸಿಲಿಂಡರ್ ಸ್ಫೋಟಗೊಂಡು 8 ಮನೆಗಳು ಭಸ್ಮವಾಗಿವೇ. ಸ್ಪೋಟದ ತೀವ್ರತೆಗೆ 8 ಶೀಟ್ ಮನೆಗಳು ಭಸ್ಮವಾಗಿವೆ. ಅಗ್ನಿ ಅವಘಡದಲ್ಲಿ ಒಬ್ಬರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನದಿಸುವ ಕಾರ್ಯವನ್ನು ಮುಂದುವರೆಸಿದ್ದಾರೆ.ಬೆಂಗಳೂರಿನ ವಿನಾಯಕ ಸಿನೆಮಾ ಥಿಯೇಟರ್ ಬಳಿ ನಡೆದ ಘಟನೆಯಾಗಿದ್ದು, ಚಾಮರಾಜಪೇಟೆ ಆನಂದಪುರ ಬಳಿ 8 ಮನೆಗಳು ಬೆಂಕಿಯ ಅಟ್ಟಹಾಸಕ್ಕೆ ಎಂಟು ಶೀಟ್ ಮನೆಗಳು ಧಗ ಧಗನೇ ಉರಿಯುತ್ತಿವೆ ಎನ್ನಲಾಗುತ್ತಿದೆ.
ಅವಘಡದಲ್ಲಿ ಗೋಧಾಮ ಸೇರಿದಂತೆ ಗೋಧಾಮಿನ ಪಕ್ಕದಲ್ಲಿರುವ 8 ಮನೆಗಳಿಗೂ ಬೆಂಕಿ ತಗುಲಿದೆ ಈ ವೇಳೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ವಿನಾಯಕ ಥೇಟರನ ಎದುರುಗಡೆ ಇರುವ ಗೌತಮಿನಲ್ಲಿ ಬೆಂಕಿ ತಲುಗಿದ್ದು, ಬಹುಶಹ ಸಿಲಿಂಡರ್ ಗಳು ಬ್ಲಾಸ್ಟ್ ಆಗಿರಬಹುದು ಎಂದು ಶಂಕಿಸಲಾಗುತ್ತಿದೆ.
ಅಲ್ಲದೆ ಮನೆಯ ಅಲಂಕಾರಿಕ ವಸ್ತುಗಳ ಗೋದಾಮಿಗೆ ಬೆಂಕಿ ತಗುಲಿದ್ದು, ಬೆಂಕಿ ತಗಲುತ್ತಿದ್ದಂತೆ ಅದರ ಪಕ್ಕದಲ್ಲಿರುವ ಸುಮಾರು 8 ಶೀಟ್ ಮನೆಗಳಿಗೂ ಬೆಂಕಿ ಆವರಿಸಿದೆ.ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯವನ್ನು ಮುಂದುವರೆಸಿದ್ದಾರೆ. ಆದರೆ ಘಟನೆಗೆ ಪ್ರಮುಖವಾದಂತ ಕಾರಣ ಏನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ ಆದರೆ ನಿಖರವಾದ ಅಂತಹ ಮಾಹಿತಿ ನಿನ್ನಷ್ಟೇ ಬರಬೇಕಿದೆ ಈ ದುರಂತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.