ನಾವು ಸಚಿವರ ಆಪ್ತ ಎಂದು ದರ್ಪ ತೋರಿಸಿದ ಭರತ್ ರೆಡ್ಡಿ ಗ್ಯಾಂಗ್,
ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ರಾತ್ರಿ ಸುಮಾರು 12 ಘಂಟೆ ಸಮಯದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಮೇಲೆ ಭರತ್ ರೆಡ್ಡಿ ಗ್ಯಾಂಗ್ ಹಲ್ಲೆ ನಡಿಸಿದೆ, ಹೌದು ಪೊಲೀಸ್ ಜೀಪಿನಲ್ಲಿ ಗಸ್ತು ಮಾಡುವ ಸಂದರ್ಭದಲ್ಲಿ ಕಾರಿನಲ್ಲಿ ನಿಂತಿದ್ದ ಭರತ್ ರೆಡ್ಡಿ ಗ್ಯಾಂಗ್ ಗೆ ಕೇಳಿದಾಗ ರಾತ್ರಿ ಸಮಯದಲ್ಲಿ ಏನು ಮಾಡುತಿದ್ದೀರಾ ಹೋಗಿ ಮನೆಗೆ ಎಂದು ಪೊಲೀಸ್ ರು ಪ್ರಶ್ನಿಸಿದಾಗ ಅವರು ನೀನು ಯಾರು ಕೇಳೋಕೆ ನಾನು ಡಿ ಸುಧಾಕರ್ ಸಚಿವರ ಆಪ್ತ ಎಂದು ಹೇಳಿ ಜೀಪಿನ ಬೀಗ ಎಳೆದುಕೊಂಡು ದರ್ಪ ತೋರಿಸಿ ಎಸ್ ಪಿ ಗೆ ಕಾಲ್ ಮಾಡ್ಲ ಡಿ ವೈ ಎಸ್ ಪಿ ಗೆ ಕಾಲ್ ಮಾಡ್ಲಾ ಐ ಜಿ ನಂಬರ್ ಕೊಡು ಕಾಲ್ ಮಾಡ್ತೇನೆ ಎಂದು ಹೇಳಿ ಅವರ ಹಲ್ಲೆ ನಡಸಿ ಭರತ್ ರೆಡ್ಡಿ ದರ್ಪ ತೋರ್ಸಿದ್ದಾನೆ ಈ ಪ್ರಕರಣವು ಬಡಾವಣೆ ಠಾಣೆ ಯ ಪಿಎಸ್ಐ ರಘು ಆರೋಪಿ ಗಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ

