ದೆಹಲಿ: ಎಂಎಸ್ ಧೋನಿ ವಿರುದ್ದ ದೆಹಲಿ ಹೈಕೋರ್ಟ್ನಲ್ಲಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ಜನವರಿ 29ರಂದು ನಡೆಯಲಿದೆ.
ಅವರ ವಿರುದ್ಧ ಮಾಜಿ ವ್ಯಾಪಾರ ಪಾಲುದಾರರಾದ ಮಿಹಿರ್ ದಿವಾಕರ್ & ಸೌಮ್ಯಾ ವಿಶ್ವಾಸ್ ಮೊಕದ್ದಮೆ ಹೂಡಿದ್ದಾರೆ. ಇತ್ತೀಚಿಗೆ ಧೋನಿ ಅವರಿಬ್ಬರಿಗೆ 15 ಕೋಟಿ ರೂ. ವಂಚನೆ ಮಾಡಿದ್ದಕ್ಕಾಗಿ ಲೀಗಲ್ ನೋಟಿಸ್ ಕಳುಹಿಸಿದ ನಂತರ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ. ಈ ಬಗ್ಗೆ 29ರಂದು ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಹೇಳಿದೆ. ಈ ಬಗ್ಗೆ ಧೋನಿ & ಅವರ ವಕೀಲರಿಗೆ ಮಾಹಿತಿ ರವಾನಿಸಲಾಗಿದೆ.