ಬೆಂಗಳೂರು : ದೇವನಹಳ್ಳಿ ತಹಶಿಲ್ದಾರ್ ಶಿವರಾಜ್ ಸೇವೆಯಿಂದ ಅಮಾನತುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆಯ ಮುಕ್ತಾರ್ ಪಾಷ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕರು ಕರ್ನಾಟಕ ಲೋಕಾಯುಕ್ತ ರ ವರದಿ ಅನ್ವಯ ಅಮಾನತು ಮಾಡಲಾಗಿದೆ. ತಹಶಿಲ್ದಾರ್ ಶಿವರಾಜ್, ಕುಟುಂಬ, ಬೇನಾಮಿ ಹೆಸರಲ್ಲಿ ಆಕ್ರಮ ಆಸ್ತಿಗಳಿಕೆ ಆರೋಪ ಕೇಳಿ ಬಂದಿತ್ತು 17-08-2023 ರಂದು ಶಿವರಾಜ್ ರವರಿಗೆ ಸೇರಿದ 12ಕಡೆ ಲೋಕಾಯುಕ್ತ ದಾಳಿ ನಡೆಸಿತ್ತು.
ದಾಳಿ ನಂತರ ಶಿವರಾಜ್ ರವರ ಬೇನಾಮಿ ಮತ್ತು ಕುಟುಂಬದ ಹೆಸರಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಅಕ್ರಮ ಆಸ್ತಿ ಶೇ 225 ರಷ್ಟು ಹೆಚ್ಚಳ ಸಾಭೀತಾಗಿದೆ. ಅಧಿಕಾರಿ ಸೇವೆಯಲ್ಲಿ ಮುಂದುವರೆದರೆ ಸಾಕ್ಷ್ಯನಾಶ ಹಿನ್ನಲೆ ಅಮಾನತು ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆಯ ಮುಕ್ತಾರ್ ಪಾಷ ಆದೇಶ ಹೊರಡಿಸಿದ್ದಾರೆ.