ವಿಜಯಪುರ : ಡಿಕೆ ಶಿವಕುಮಾರ್ ಯಾವ ಕಾಲಕ್ಕೂ ಸಿಎಂ ಆಗಲ್ಲ. ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ. ಇದೀಗ್ ಡಿಕೆಶಿ ಸೂಪರ್ ಸಿಎಂ ಆಗಿದ್ದಾರೆ. ಆದ್ರೇ, ಯಾವ ಕಾಲಕ್ಕೂ ಡಿಕೆ ಶಿವಕುಮಾರ್ ಸಿಎಂ ಆಗಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಪರ ಯತ್ನಾಳ ಬ್ಯಾಟಿಂಗ್…
ಸಿಎಂ ಸಿದ್ದರಾಮಯ್ಯಗೆ ಬಾಳ್ ನೋವು ಇದೆ. ಕಾಂಗ್ರೆಸ್ನ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ..! ಇದೀಗ್ ಸುಮ್ಮನೆ ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಆದ್ರೇ, ಆಡಳಿತ ಮಾತ್ರ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ಇನ್ನು ಆರು ತಿಂಗಳು ಆಗ್ಲಿ, ಐದು ವರ್ಷ ಆಗ್ಲಿ ಸಿಎಂ ಸಿದ್ದರಾಮಯ್ಯ ಅವರೇ ಇರುತ್ತಾರೆ.