ವಿಜಯಪುರ: ನಗರದ ಕೆ.ಎಚ್.ಬಿ ಕಾಲೋನಿಯ ಯೋಗ ಗಾರ್ಡನ್ ನಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಮೋದಿಜೀ ಅವರ ನವವರ್ಷಗಳ ಸಾಧನೆಗಳನ್ನು ಖ್ಯಾತ ವೈದ್ಯ ಡಾ. ಬಾಬು ರಾಜೇಂದ್ರ ನಾಯಕ್ ನೇತೃತ್ವದಲ್ಲಿ ಜನರಿಗೆ ತಿಳಿಸಲಾಯಿತು.
ನವರಾತ್ರಿಯ ಸಂದರ್ಭದಲ್ಲಿ ಮೋದಿ ಅವರ ನವವರುಷಗಳ ಸಾಧನೆಯನ್ನು ಮನೆ ಮನೆಗಳಿಗೆ , ಮನ ಮನಗಳಿಗೆ ಮುಟ್ಟಿಸುವ ಕಾರ್ಯವನ್ನು ಶ್ರೀತುಳಸಿಗಿರೀಶ ಫೌಂಡೇಶನ್ ಮಾಡಲಿದೆ. ಎಂದು ಡಾ. ಬಾಬು ರಾಜೇಂದ್ರ ನಾಯಕ್ ರವರು ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ ಬೈಚಬಾಳ, ರೋಹನ್ ಆಪ್ಟೆ, ಪ್ರೇಮ ಕೆ, ಗಿರಿಧರ ಎಚ್, ಶ್ರೀತುಳಸಿಗಿರೀಶ ಫೌಂಡೇಶನ್ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.