ಈ ನ್ಯಾಚುರಲ್ ಡ್ರಿಂಕ್ಸ್ ಕುಡಿದರೆ ಸಾಕು, ಹೈ ಬಿಪಿ ಕಡಿಮೆಯಾಗುತ್ತೆ..!
ತಿನ್ನುವ ಆಹಾರದಲ್ಲಿ ಉಪ್ಪು ಹೆಚ್ಚಾದರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. ಬಿಪಿ ಹೆಚ್ಚಾದರೆ ಅದರಿಂದ ಹೃದಯದ ಸಮಸ್ಯೆ ಬರುತ್ತದೆ. ಇದನ್ನು ಹಾಗೆ ಬಿಟ್ಟರೆ ಸಾವು ಸಂಭವಿಸುತ್ತದೆ. ಹೀಗಾಗಿ ನಾವು ಸಂತೋಷವಾಗಿ ಬದುಕಬೇಕು ಎಂದರೆ ಆರೋಗ್ಯಕರವಾಗಿ ತಿನ್ನಬೇಕು. ಜಡ ಜೀವನ ಶೈಲಿಯನ್ನು ಬದಿಗಿಟ್ಟು ವ್ಯಾಯಾಮವನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಸಕ್ಕರೆ ಕಾಯಿಲೆ ಮತ್ತು ಬೊಜ್ಜನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಪಾರ್ಶ್ವವಾಯು, ಕಿಡ್ನಿ ಸಮಸ್ಯೆ, ಹೃದಯದ ಸಮಸ್ಯೆ ಇವೆಲ್ಲವೂ ರಕ್ತದ ಒತ್ತಡ ಹೆಚ್ಚಾಗುವ ಹಾಗೆ ಮಾಡುತ್ತವೆ. ಆದರೆ ಆಹಾರ ಪದ್ಧತಿ ಮತ್ತು ಜೀವನ ಶೈಲಿಯ ಜೊತೆಗೆ ಕೆಲವೊಂದು ಆರೋಗ್ಯಕರವಾದ ಪಾನೀಯಗಳನ್ನು ಸೇವಿಸುವುದರಿಂದ ರಕ್ತದ ಒತ್ತಡವನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ನೆಲ್ಲಿಕಾಯಿ ಶುಂಠಿ ಜ್ಯೂಸ್
ನೆಲ್ಲಿಕಾಯಿಯಲ್ಲಿ ನಮ್ಮ ದೇಹದ ಆಕ್ಸಿಡೆಟೀವ್ ಒತ್ತಡವನ್ನು ಕಡಿಮೆ ಮಾಡುವ ಗುಣವಿದೆ. ಇದರಿಂದ ರಕ್ತದ ಒತ್ತಡ ನಿಯಂತ್ರ ಣವಾಗುತ್ತದೆ. ಶುಂಠಿ ತನ್ನಲ್ಲಿ ರಕ್ತನಾಳಗಳನ್ನು ಹಿಗ್ಗಿಸುವ ಗುಣ ಹೊಂದಿದೆ. ಹೀಗಾಗಿ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ ಮತ್ತು ರಕ್ತದ ಒತ್ತಡ ಕಡಿಮೆಯಾಗುತ್ತದೆ.
ಧನಿಯಾ ಕಾಳುಗಳ ನೀರು
ಧನಿಯಾ ಅಥವಾ ಕೊತ್ತಂಬರಿ ಬೀಜಗಳು ಮೂತ್ರವರ್ಧಕ ಲಕ್ಷಣಗಳನ್ನು ಒಳಗೊಂಡಿವೆ. ಹೀಗಾಗಿ ನಮ್ಮ ದೇಹದಲ್ಲಿ ಹೆಚ್ಚಾಗಿರುವ ಸೋಡಿಯಂ ಪ್ರಮಾಣವನ್ನು ಮೂತ್ರದ ಮೂಲಕ ಇವು ಹೊರ ಹಾಕುತ್ತವೆ.
ಇದರಿಂದ ರಕ್ತದ ಒತ್ತಡ ತಾನಾಗಿಯೇ ಕಡಿಮೆಯಾ ಗುತ್ತದೆ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಬೀಟ್ಯೂಟ್ ಮತ್ತು ಟೊಮೆಟೊ ಜ್ಯೂಸ್
ಬೀಟ್ಯೂಟ್ ತನ್ನಲ್ಲಿ ನೈಟ್ರೇಟ್ ಹೊಂದಿದ್ದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ.
ನೈಟ್ರೇಟ್ ಪ್ರಮಾಣವು ನಮ್ಮ ರಕ್ತದಲ್ಲಿ ನೈಟ್ರಿಕ್ ಆಕ್ಸೆಡ್ ಶೇಖರಣೆಯಾಗುವಂತೆ ಮಾಡಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಟೊಮೆಟೊ ಹಣ್ಣು ತನ್ನಲ್ಲಿ ಲೈಕೋಪಿನ್ ಮತ್ತು ಬೀಟಾ ಕ್ಯಾರೋಟಿನ್ ಜೊತೆಗೆ ವಿಟಮಿನ್ ಇ ಪ್ರಮಾಣವನ್ನು ಒಳಗೊಂಡಿರುವುದರಿಂದ ಇದೊಂದು ಪರಿಣಾಮಕಾರಿಯಾದ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಇದರಿಂದ ಫ್ರೀ ರಾಡಿಕಲ್ ಅಂಶಗಳು ತಮ್ಮ ಉಪಟಳವನ್ನು ಕಡಿಮೆ ಮಾಡಿಕೊಳ್ಳುತ್ತವೆ ಮತ್ತು ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.
ಮೂಲಂಗಿ ಜ್ಯೂಸ್
ಮೂಲಂಗಿಯಲ್ಲಿ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಕಂಡು ಬರುವುದರ ಜೊತೆಗೆ, ಪ್ರಬಲ ಆಂಟಿಆಕ್ಸಿಡೆಂಟ್ಗಳು ಹಾಗೂ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ ಖನಿಜಾಂಶಗಳು ಉನ್ನತ ಪ್ರಮಾಣದಲ್ಲಿ ಕಂಡುಬರುತ್ತವೆ.
ಹೀಗಾಗಿ, ಅಧಿಕ ರಕ್ತದೊತ್ತಡದ ಕಾಯಿಲೆಯಿಂದ ಬಳಲುತ್ತಿ ರುವವರು, ಪ್ರತಿದಿನ ಒಂದೊಂದು ಲೋಟ ಆಗುವಷ್ಟು ಮೂಲಂಗಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡುವುದರ ಜೊತೆಗೆ, ಹೃದಯಕ್ಕೆ ಎದುರಾಗುವ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.