ವಿಜಯಪುರ ನಗರದ ಪಾಟೀಲ ಪ್ಲಾನೆಟ್ ನಲ್ಲಿ ಇಜಿ ಪ್ಲಾಟ್ಸ್ ಮೊಬೈಲ ಆಪ್ ಬಿಡುಗಡೆ ಸಮಾರಂಭ
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ ಅವರು ಮಾತನಾಡಿ ನಮ್ಮ ವಿಜಯಪುರ ನಗರದ ಯುವಕರು ಸೇರಿ ಒಂದು ಒಳ್ಲೆಯ ಯಾಪ ತಯಾರಿಸಿದ್ದಾರೆ ಅದಕ್ಕಾಗಿ ಅವರಿಗೆ ಅಭಿನಂದನೆಗಳು ತಿಳಿಸುತ್ತೇನೆ. ಇತ್ತೀಚಿಗೆ ಭೂಮಿ ಮಾರುವ ಕೆಲವೊಂದು ದಲ್ಲಾಳಿಗಳು ಮೋಸ ಮಾಡುವದನ್ನು ಕಂಡು ಬರುತ್ತಿದೆ ಇಂತಹ ಸಮಯದಲ್ಲಿ ನಮ್ಮ ವಿಜಯಪುರದ ಯುವಕರು ಮಾಡಿದ ಮೊಬೈಲ ಆಪದಿಂದ ಪಾರದರ್ಶಕತೆ ಇನ್ನು ಹೆಚ್ಚಾಗುತ್ತೆ ಅಂದರು.
ಆರ್ಕಿಟೇಕ್ಟ ಅಶೋಷಿಯೇಷನ್ ಖಜಾಂಚಿ ಅರುಣ ಸರಸಂಬಿ ಮಾತನಾಡಿ
ಯುವಕರು ಮಾಡಿದ ಆಪ ನಿಜಕ್ಕೂ ಒಂದು ರಿಯಲ ಎಸ್ಟೇಟ ದಲ್ಲಿ ವ್ಯಾಪಾರಲ್ಲಿ ಮೈಲಿಗಲ್ಲು ಆಗಲಿದೆ ಅಂದರು. ಮಹಾನಗರ ಪಾಲಿಕೆ ಸದಸ್ಯರಾದ ಗಿರೀಶ ಬಿರಾದರ ಮಾತನಾಡಿ ನಮ್ಮ ವಿಜಯಪುರ ಯುವಕರು ಆದರಲ್ಲಿ ನಮ್ಮ 29 ನೆ ವಾರ್ಡ ಯುವಕರಾಗಿದ್ದು ಹೆ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಇದು ಆಪ ರಾಜ್ಯವ್ಯಾಪಿ ಹೆಸರುವಾಸಿ ಆಗಲೆಂದು ಪ್ರಾರ್ಥಿಸುತ್ತೇನೆ ಅಂದರು. ಸಮಾಜಸೇವಕರಾದ ಗಿರೀಶ ನೀಲಗುಂದ ಮಾತನಾಡಿ ಡಿಜಿಟಲ್ ಭಾರತದ ಕನಸನ್ನು ನನಸಾಗುವ ಸಮಯ ಬಂದಿದೆ ಅದಕ್ಕೇ ಸಾಕ್ಷಿ ನಮ್ಮ ವಿಜಯಪುರದ ಯುವಕರು ಅಂದರು.

