ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನ ನಿಜವಾದ ಗಂಡು ಎಂದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ. ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು.
ಹಿಂದುತ್ವದ ಬಗ್ಗೆ ಶಾಸಕ ಯತ್ನಾಳ 90% ಜೋರದಾರ ಮಾತನಾಡುತ್ತಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿಜವಾದ ಗಂಡು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಯತ್ನಾಳ ನಮ್ಮ ಲೀಡರ್. ಇದು ನನಗೆ ಖುಷಿ ಇದೆ. ಆದ್ರೇ, 10% ಮಾತ್ರ ಆಚೆ ಈಚೆ ಮಾತನಾಡುತ್ತಾರೆ. ಅದನ್ನು ನಾವು ಸರಿ ಪಡಿಸುತ್ತೇವೆ ಎಂದರು.