ಗಣೇಶ ಮೆರವಣಿಗೆಯಲ್ಲಿ ನಾಥೂರಾಮ್ ಗೋಡ್ಸೆ ಫೋಟೋ ಪ್ರದರ್ಶನ ಮಾಡಿದವರ ವಿರುದ್ಧ ದೂರು ದಾಖಲು…!
ಚಿತ್ರದುರ್ಗ : ಗಣೇಶ ಮೆರವಣಿಗೆಯಲ್ಲಿ ನಾಥೂರಾಮ್ ಗೋಡ್ಸೆ ಫೋಟೋ ಪ್ರದರ್ಶ ಮಾಡಲಾಗಿದ್ದು, ಈ ಸಂಬಂಧ ಚಿತ್ರದುರ್ಗ ನಗರ ಠಾಣೆ ಪೊಲೀಸರು FIR ದಾಖಲು ಮಾಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಹಿಂದೂ ಮಹಾಗಣಪತಿ ಶೋಭಯಾತ್ರೆ ವೇಳೆ ನಾಥೂರಾಮ್ ಗೋಡ್ಸೆ ಫೋಟೋ ಪ್ರದರ್ಶಿಸಿದ್ದನು. ಜೋಗಿಮಟ್ಟಿ ರಸ್ತೆ ನಿವಾಸಿ ಹನುಮಂತಪ್ಪ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಫೋಟೋ ಬಳಕೆ ಎಂದು ದೂರು ನೀಡಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಫೋಟೋ ಬಳಕೆ ಆರೋಪ ಮಾಡಿದ್ದಾರೆ. ಗೋಡ್ಸೆ ಫೋಟೋ ಪ್ರದರ್ಶಿಸಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.ಚಿತ್ರದುರ್ಗದ ನಗರ ಠಾಣೆಯಲ್ಲಿ IPC 505/1(C), 505/1(B) ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಗೋಡ್ಸೆ ಫೋಟೋ ಪ್ರದರ್ಶಿಸಿದ್ದ ವ್ಯಕ್ತಿ ಬಂಧನಕ್ಕೆ ಆಗ್ರಹಿಸಿದರು.