ವಿಜಯಪುರ : ನಗರದಲ್ಲಿ ಮಾದ್ಯಮ ಗೋಷ್ಠಿ ನಡೆಸಿ ಮಾತನಾಡಿದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಮಾಜಿ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ.
ಅಖಂಡ ಬಿಜಾಪುರ ಜಿಲ್ಲೆಯ ಕಬ್ಬು ಬೆಳೆಗಾರರ ಭವನೆಯನ್ನು ನೀಗಿಸುವಗೋಸ್ಕರ ಆಗಿನ ಧಿಮಂತ ನಾಯಕರುಗಳಾದ ದಿವಂಗತ ಬಿ.ಟಿ. ಪಾಟೀಲ ಶಿರಬೂರ, ದಿವಂಗತ ಶ್ರೀ ಸಿ.ಎಂ ದೇಸಾಯಿ ಜೈನಾಪುರ, ದಿವಂಗತ ಶ್ರೀ ವಾಸ್ತ ದೇಸಾಯಿ ಯಡಳ್ಳಿ, ಡಾ. ಎಮ್.ಆರ್.ದೇಸಾಯಿ ಮತ್ತು ಜೆ.ಟಿ.ಪಾಟೀಲ ಯಡಹಳ್ಳಿ ಇವರೆಲ್ಲರ ಅವಿರತ ಪರಿಶ್ರಮದಿಂದ ಸಹಕಾರ ಭೀಷ ಕೆ.ಎಚ್. ಪಾಟೀಲರ ಮಾರ್ಗ ದರ್ಶನದಲ್ಲಿ 1982 ರಲ್ಲಿ ಕಾರ್ಖಾನೆ ನೂಂದಿಸಲ್ಪಟ್ಟು ಸನ್ 1992, 93 ರಲ್ಲಿ ಕಾರ್ಖಾನೆ ತನ್ನ ಮೊದಲ ಕಬ್ಬು ಅರಗಿಸುವ ಅರಿಯುವಿಕೆ: ಹಂಗಾಮ ಪ್ರಾರಂಭಿಸಿತು ಅದರ ಪರಿನಾಮಗಿ ಈ ಭಾಗದ ರೈತರ ಅಡಾ ಜ್ಯೋತಿ ಹೊತ್ತಿಕೊಂಡಿತಲ್ಲದೆ, ಮೇಲಿನ ಎಲ್ಲ ನಾಯಕರುಗಳ ಕೊಡುಗೆಯನ್ನ ಅವಳಿ ಜಿಲ್ಲೆಯ ರೈತರು ಜೀವ ಮಾನವವರಿಗೆ ಸರಿಸುವಂತಾಯಿತು 1992, 93 ರಿಂದ 2003 ರ ವರೆಗೆ ಆಡಳಿತಕ್ಕೆ ಬಂದ ನಿಸ್ವಾರ್ಥ ಆಡಳಿತ ಮಂಡಳಿಯ ಪರಿಶ್ರಮದಿಂದ ಇಡೀ ದೇಶದಲ್ಲಿಯ ಮಾದರಿಯ ಕಾರ್ಖಾನೆಯಾಗಿ ಹೊರಹೊಮ್ಮಿ ರೈತರ ಬಾಳನ್ನು ಹಸನ್ಮುಖಿಗೊಳಿಸಿತು.
2008 ರಿಂದ 2013 ಕ್ಕೆ ಆಡಳಿತಕ್ಕೆ ಬಂದ ಶ್ರೀ ಶಶಿಕಾಂತಗೌಡ ದೇಸಾಯಿಯವರ ಪಾಟೀಲವರ ಆಡಳಿತ ಮಂಡಳಿಯವರು ತೆಗೆದುಕೊಂಡ ಸ್ವಜನಪಕ್ಷಪಾತ್ರ ಆಡಳಿತ ಮಂಡಳಿಯ ನಿರ್ದಾರದಿಂದ ಕಾನೂನು ಬಾಹಿರವಾಗಿ ಸುಮಾರು 480 ಶೇರುದಾರರ ಹೆಸರನ್ನು ಬದಲಾಯಿಸಿ ತಮಗೆ ಬೇಕಾದವರಿಗೆ ವರ್ಗಾಯಿಸಿದರು.
ಮಾರಾಟ ಮಾಡಲ್ಪಟ್ಟ ಸಕ್ಕರೆಯ ಸುಮಾರು 3 ಕೋಟಿಯಪ್ಪ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಹಾಗೂ ಉದ್ರಿ ಮಾರಾಟ ಮಾಡಿ ಅಡಾವ ಪತ್ರಿಕೆಯಲ್ಲಿ ಸಕ್ಕರೆಯಿಂದ ಬರಬೇಕಾದ ಬಾಬತ್ತೆಂದು ಆಡಾವ ಪತ್ರಿಕೆಯಲ್ಲಿ ತೋರಿಸಿದ್ದಾರೆ.
ಸಕ್ಕರೆ ಇಳುವರಿ ಪ್ರಮಾಣವನ್ನು ಪ್ರತಿಶತ 0.02, ಕಡಿಮೆ ತೋರಿಸಿ ಪ್ರತಿ ವರ್ಷ ಸುಮಾರು 12 ರಿಂದ 15 ಸಾವಿರ ಕ್ವಿಂಟಲ್ ಚೀಲದಷ್ಟು ಅಂದಾಜು 4 ರಿಂದ 5 ಕೋಟಿ ಒಟ್ಟಾರೆಯಾಗಿ 20 ರಿಂದ 25 ಕೋಟಿ ಸಕ್ಕರೆಯು ಖಾಸಗಿಯಾಗಿ ಮಾರಾಟ ಮಾಡಿಕೊಂಡಿದ್ದು ಮಾರಾಟ ಮಾಡಲು ಸಾಧ್ಯವಾಗದ 2000 ಕ್ವಿಂಟಲ ಸಕ್ಕರೆಯನ್ನ ಲೆಕ್ಕಕ್ಕೆ ನೀಡದೆ ಗೋಡುವಿನಲ್ಲಿ ಸಕ್ಕರೆ ಸಿಕ್ಕಿತ್ತು.
ಕಾಯ್ದೆ ಬಾಹಿರ ದುರಾಡಳಿತಕ್ಕೆ ಶೇರುದಾರರು ಬೇಸತ್ತು 2013 ರಲ್ಲಿ ಕುಮಾರ ಚಂದ್ರಕಾಂತ ದೇಸಾಯಿಯವರ ಆಡಳಿತ ಮಂಡಳಿಯನ್ನು ಚುನಾಯಿಸಿದರು. ಕುಮಾರ ದೇಸಾಯಿಯವರ ಆಡಳಿತಕ್ಕೆ ಬಂದ ಮೊದಲ ಹಂತದಲ್ಲಿಯ ತಗೆದುಕೊಂಡ ಕೆಲವು ನಿರ್ಧಾರಗಳು
ಕಾನೂನು ಬಾಹಿರವಾಗಿ ಶೇರು ವರ್ಗಾವಣೆಗಳನ್ನು ರದ್ದುಗೊಳಿಸುವ ಉದ್ದೇಶದಿಂದ ಬಯೋಮೆಟ್ರಿಕ್ಸ್ ಪದ್ಧತಿಯನ್ನು ಜಾರಿಗೊಳಿಸಲಾಯಿತು. ಇದರಿಂದ ಉನೂನು ಬಾಹಿರವಾಗಿ ಶೇರು ಮಾರಾಟವನ್ನು ತಡೆಗಟ್ಟಲಾಯಿತು. ಮತ್ತು ಇದರ ಪರಿಣಾಮವಾಗಿ ಶಠಿಕಾಂಶಗೌಡರ ಅಡಳಿತ ಮಂಡಳಿಯಲ್ಲಿ ಕಾನೂನು
ಬಾಹೀರವಾಗಿ ವರ್ಗಾಯಿಸಿದ ಸುಮಾರು 290 ಶೇರುಗಳನ್ನು ಮೂಲ ಮಾಲಕರಿಗೆ ವರ್ಗಾಯಿಸಿ ಅನ್ಯಾಯವನ್ನು ಸರಿಪಡಿಸಲಾಯಿತು.
ಸಕ್ಕರೆ ಇಳುವಳಿಯ ಪ್ರಮಾಣವನ್ನು ಕಡಿಮೆ ತೋರಿಸಿ ಕೊಟ್ಯಾನುಗಟ್ಟಲೇ ಬೆಲೆ ಬಾಳುವ ಸಕ್ಕರೆಯ, ಅವ್ಯವಹಾರವನ್ನು ತಪ್ಪಿಸಲು ಪ್ರತಿ ಸಕ್ಕರೆಯ ಚೀಲಗಳ ಮೇಲೆ ಕ್ರಮ ಸಂಖ್ಯೆ ಮೂಡಿಗೆ ಮಹಿನನ್ನು ಅಳವಡಿಸಿ ಭವಿಷ್ಯದಲ್ಲಿ ಯಾವ ರೀತಿಯಾಗಿ ಅವ್ಯವಹಾರವಾಗುವುದನ್ನು ತಡೆಗಟ್ಟಲಾಯಿತು.
ಕಮಿಷನ್ ಗೋಸ್ಕರ ಹಿಂದಿನ ಆಡಳಿತ ಮಂಡಳಿಯ ಕೊನೆಯ ಅವಧಿಯಲ್ಲಿ ಇತನಾಲ್ ಘಟಕ ಸ್ಥಾಪಿಸಲು ಬೇಕಾದ ಸಾಮಗ್ರಿಗಳನ್ನು ಸುಮಾರು 57 ಕೋಟಿಯಲ್ಲಿ ಅರ್ಥ ಮತನರಿಗಳನ್ನು ಆರ್ಡ್ರಗಳನ್ನು ಕೊಟ್ಟು ಖರೀದಿ ಮಾಡಿ ಗೋಡಾಮಿನಲ್ಲಿ ಸ್ಟಾಕ್ ಇಟ್ಟು ಹೋದರು, ಮುಂದೆ ಬಂದ ಕುಮಾರ ದೇಸಾಯಿ ಆಡಳಿತ ಮಂಡಳಿಯವರ ಇತನಾಲ ಘಟಕವನ್ನು ಪೂರ್ಣಗೊಳಿಸಲು ಬಾಕಿ ಉಳಿದಂತ ಸುಮಾರು 30 ಕೋಟಿಯ ಸಾಮಗ್ರಿಗಳನ್ನು ಖರೀದಿ ಮಾಡಿ ಇತನಾಲೆ, ಘಟಕವನ್ನು ಪೂರ್ಣಗೊಳಿಸಿ ಉತ್ಪಾದನೆಯನ್ನು ಪ್ರಾರಂಭ ಮಾಡಲಾಯಿತು. ಘಟಕ್ಕಕೆ ತಗುಲಿದೆ 87 ಕೋಟಿ ಸಾಲದ ಪೈಕಿ ಸುಮಾರು 72 ಕೋಟಿಯಷ್ಟು ಮರು ಪಾವತಿಸಿ ಕೇವಲ 15 ಕೋಟಿ ಸಾಲವನ್ನು 2018ರ ಕೊನೆಯಲ್ಲಿ ಉಳಿಸಿದ್ದರು.
2015) ರಲ್ಲಿ ನಂದಿ ಸಕ್ಕರೆ ಕಾರಖಾನೆಯಲ್ಲಿ ಕಾರ್ಯ ವ್ಯಾಪ್ತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕಬ್ಬಿನ ಕ್ಷೇತ್ರ ಹೆಚ್ಚಾದ್ದರಿಂದ ಕಬ್ಬು ಮುರಿಸುವಲ್ಲಿ ರೈತರು ಅನುಭವಿಸುತ್ತಿದ್ದ ಕಷ್ಟಗಳನ್ನು ತಪ್ಪಿಸಲು ಪ್ರತಿದಿನ 2000 ಮೆಟ್ರಿಕ್ ಟನ್ದ ಸಮರ್ಥ್ಯವನ್ನು ಹೆಚ್ಚಿಸಿ 1500 ಟನ್ನಿಗೆ ಎತ್ತರಿಸುವ ಯೋಜನೆಯನ್ನು ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅನುಮತಿಯನ್ನು ಪಡೆಯಲಾಯಿತು. ಈ ದಿಶೆಯಲ್ಲಿ ವಸಂತದಾದಾ ಸಕ್ಕರ ತಾಂತ್ರಿಕ ಸಂಸ್ಥೆಯಿಂದ ಮಿಶ್ರಿತ (ಡಿಪಿಆರ್) ಯೋಜನೆಯನ್ನು ತಯಾರಿಸಿ 224 ಕೋಟಿ ವೆಚ್ಚದಲ್ಲಿ ಯೋಜನೆಯ ಸಿದ್ಧ ಪಡಿಸಿ 2019 ರ ಹಂಗಾಮಿನಲ್ಲಿ ಟರ್ನಕೀ ಆಧಾರದ ಮೇಲೆ ಉಲ್ಟಾ ಕಂಪನಿಗೆ ಹಾಗೂ ಇನ್ನಿತರ ಉಪಕರಣಗಳಿಗೆ ಯೋಜನೆಯನ್ನು ಸಿದ್ದ ಪಡಿಸಲಾಯಿತು. ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಎನ್.ಸಿ. ಡಿ.ಸಿ. ಯಿಂದ 177, ಕೋಟಿ, ಎಸ್.ಡಿ.ಎಫ್ ದಿಂದ 55 ಕೋಟಿ ಸಾಲವನ್ನು ಮಂಜೂರು ಪಡೆಯಲಾಗಿತ್ತು. ರೈತರ ವಂತಿಕೆಯಿಂದ ೨೪ ಕೋಟಿ ಹಣವನ್ನು ಸಂಗ್ರಹಿಸಲಾಯಿತು.
ಈ ಎಲ್ಲ ಯೋಜನೆಗಳು ಸಿದ್ಧಗೊಂಡಾಗ ಈಗಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಶಿಕಾಂತಗೌಡ ಪಾಟೀಲ ಹಾಗೂ ಅವರ ನಿರ್ದೇಶಕ ಮಂಡಳಿಯವರು ಈ ಯೋಜನ ಪ್ರಾರಂಭವಾಗಬಾರದೆಂದು ಸರ್ಕಾರದ ಸಂಬಂಧಿಸಿದ ಇಲಾಖೆಗಳಿಗೆ ತಕರಾರು ಅರ್ಜಿಯನ್ನು ಸಲ್ಲಿಸಿದರು. ಇದಾದ ಮೇಲೆ ಅಧಿಕಾರಕ್ಕೆ ಬಂದ ಶಶಿಕಾಂತಗೌಡ ಪಾಟೀಲರು ಯೋಜನೆಯನ್ನು ಉದ್ದೇಶಪೂರ್ವಕವಾಗಿ 2 ವರ್ಷಗಳವರೆಗೆ ನೆನೆಗುದಿಗೆ ಬೀಳುವ ಹಾಗೆ ನೋಡಿದರು ನಂತರ ಕಾನೂನು ಈರವಾಗಿ ಮೊದಲು ಅನುಮತಿ ಕೊಟ್ಟ ಕಂಪನಿಗಳನ್ನು ಕಾನೂನು ಬಾಹಿರವಾಗಿ ಬದಲಿಸಿ ಹೆಚ್ಚಿನ ಕಮೀಷನ್ ಪಡೆಯುವಗೋಸ್ಕರ್, ಕಳಪೆ ಮಟ್ಟದ ಯಂತ್ರೋಪಗಳನ್ನು ಖರೀದಿಸಲು ಅನುಮೋದನೆ ಕೊಡಲಾಯಿತು.
13500 ಇದ್ದಂತಹ ಸಾಮರ್ಥ್ಯವನ್ನು 10000 ಸಾವಿರಗೆ ಕಡಿತ ಗೊಳಿಸಿ 224 ಕೋಟಿ ಯೋಜನೆ ವೆಚ್ಚವನ್ನು 330 ಕೋಟಿ ಹೆಚ್ಚಿಸಲಾಯಿತು. ಇಷ್ಟಾದರೂ ಕೂಡಾ ಅವರ ಅಧಿಕಾರ ಅವಧಿ (2019 ರಿಂದ 2023) .ಮುಗಿದ .ರೂ ಕೂಡಾ ಕಾರ್ಖಾನೆಯ ವಿಸ್ತರಣೆಯೋಜನೆ ಕಾರ್ಯ ರೂಪಕ್ಕೆ ಬರದ ಹಾಗೆ ಉಳಿದಿದೆ.
ಇದರಿಂದ ಕಾರ್ಖಾನೆಯ ಮೇಲೆ ಸಾಕಷ್ಟು ತಣಕಾಸಿನ ಭರಕ್ಕೆ ಕಾರಣವಾಯಿತು. ಪಡೆದ ಸಾಲಗಳ 3 ಕಂತನ ಸಾಲ ಮರುಪಾವತಿ ರೂಪಾಯಿ 80 ಕೋಟಿ ಮಾಡಿದ ರೈತರ ಕಣ್ಣಿಗೆ ಕಡಿಮೆ ಬೆಲೆ ಕೊಟ್ಟು ಕಾರ್ಖಾನೆಯ ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ.
2008 ರಿಂದ 13ರ ಅವಧಿಯಲ್ಲಿ ಕಾರ್ಖಾನೆಯ ದಿನ ಹಣಕಾಸಿನ ವ್ಯವಸ್ಥೆ ಸುಭದ್ರವಾಗಿತ್ತೆಂದು ಜನರಿಗೆ ಸುಳ್ಳನ್ನು ಹೇಳುತ್ತಿದ್ದೀರಿ. ವಾಸ್ತವಿಕವಾಗಿ 2013 ರಲ್ಲಿ ಅಧಿಕಾರಕ್ಕೆ ಬಂದ ಕುಮಾರ ದೇಸಾಯಿಯವರು 2013-14ರ ಹಂಗಾಮಿ ಪ್ರಾರಂಭ ಮಾಡಲು ಯಾವ ತೆರನಾದ ಹಣಕಾಶಿನ ಸೌಲಭ್ಯ ವ್ಯವಸ್ಥೆಯನ್ನು ಮಾಡದ ಕಾರಣ ಕುಮಾರ ದೇಸಾಯಿಯವರು ಸಾಲ ಪಡೆಯಲು ಅನರ್ಹವಾದ ಪರಸ್ಥಿತಿ ಇದ್ದರಿಂದ ಹೆಚ್ಚಿನ ಬಡ್ಡಿದರದಲ್ಲಿ ಸಹಕಾರ ಸಂಘ ಸಂಸ್ಥೆಗಳಿಂದ 12 ರಿಂದ 168 ಪರ್ಸೆಂಟೆ ಬಡ್ಡಿ ಆದಾರದ ಪ್ರಾರಂಭಿಸಲಾಯಿತು. 2.50 ಕೋಟಿ ಸಾಲ ಪಡೆದು ಕಬ್ಬು ನುರಿಸುವ ಹಂಗಾಮು 2018 AS WE GET
ಇಷ್ಟೆಲ್ಲಾ ಹಣಕಾಸಿನ ಕ್ಲಿಷ್ಟ ಪರಿಸ್ಥಿತಿಗಳಿದ್ದರೂ ಕೂಡಾ ಅನಾವಶ್ಯಕವಾಗಿ ಕೇನ್ಯಾಡದಲ್ಲಿ ಕಮೀಷನ್ ಆಸೆಗೋಷ್ಠರ ಸುಸಜ್ಜಿತವಾದ ಡಾಂಬರ್ ರಸ್ತೆಯನ್ನು ತೆಗೆದು 3.5 ಕೋಟಿ ರುಪಾಯಿಯಲ್ಲಿ ಸಿಸಿ ರೋಡನ್ನು ಮಾಡಿಸಿದ್ದೀರಿ. ವಿಸ್ತರಣಾ ಯೋಜನೆ ಪ್ರಾರಂಭವಾಗದೇ ಸುಮಾರ 5.5 ಕೋಟಿ ರೂಪಾಯಿ ವೆಚ್ಚದ ಗೋಡಾನುಗಳನ್ನು 2 ವರ್ಷ ಮೊದಲೇ ನಿರ್ಮಿಸಿದ್ದೀರಿ. ಇದಲ್ಲದೆ ಸುಮಾರು 280 ಸಿಬ್ಬಂಧಿಗಳನ್ನು ಕಾನೂನು ಬಾಹೀರವಾಗಿ ಸಂದರ್ಶನವನ್ನು ನಡೆಸದೇ ಯಾವ ಪತ್ರಿಕೆಯಲ್ಲೂ ಪ್ರಕಟಿಸದೇ ನೇಮಿಸಿಕೊಂಡಿದ್ದು ಯಾವ ಪುರುಷಾರ್ಥಕ್ಕಾಗಿ.
2013ರ ರಿಂದ 2018 ರ ವರೆಗೆ ನಂದಿ ಶಿಕ್ಷಣ ಸಂಸ್ಥೆ ಕೆಲವೊಂದು ಮಾಹಿತಿಗಳು,
1) 2013 ರಲ್ಲಿ ಸಂಖ್ಯೆ ಕೇವಲ 380 ಇದ್ದಂತಹ ವಿದ್ಯಾರ್ಥಿಗಲು ಸಂಖ್ಯೆಯಲ್ಲಿ 2018 ರ ಅವಧಿಗೆ 1170 ವಿದ್ಯಾರ್ಥಿ ಸಂಖ್ಯೆಯನ್ನು ಹೆಚ್ಚಿಸಲಾಯಿತು.
2) 2013 ರಲ್ಲಿ ನಂದಿ ಶಿಕ್ಷಣ ಸಂಸ್ಥೆಯ ಇದ್ದ ಸಾಲವನ್ನು (1 ಕೋಟಿ 75 ಲಕ್ಷ), ಸಂಪೂರ್ಣ ಮರು ಪಾವತಿಸಲಾಯಿತು.
3) ಸುಮಾರು 70 ರಿಂದ 72 ಲಕ್ಷ ಬೆಲೆಯ ಹೊಸ ಬಸ್ಸುಗಳನ್ನು ಯಾವುದೆ ಸಾಲವಿಲ್ಲದೆ ಮಕ್ಕಳು ಭರಿಸದ ಫೀ ಹಣದಲ್ಲಿ ಖರೀದಿಸಲಾಯಿತು.
4) 5 ಕೋಟಿ 50 ಲಕ್ಷದ ಶಿಕ್ಷಕರ ವಸತಿ ನಿಲಯವನ್ನು ಕೂಡಾ ಮಕ್ಕಳು ಧರಿಸಿದ ಶುಲ್ಕ ಹಣದಿಂದಲೇ ಸುಮಾರು 4 ಕೋಟಿ ವೆಚ್ಚವನ್ನು ಭರಿಸಲಾಗಿತ್ತ ಇನ್ನುಳಿದ 1 ಕೋಟಿ 50 ಲಕ್ಷದ ಹಣವನ್ನ ಮಕ್ಕಳ ಶುಲ್ಕದಿಂದ ಮರು ಪಾವತಿಸಲು ಅವಕಾಶವಿತ್ತು,
5) ಇದರ ಜೊತೆಗೆ ಹೆಚ್ಚುವರಿಯಾಗಿ 50 ಲಕ್ಷ ಬೆಲೆ ಬಾಳುವ 5 ವಿದ್ಯಾರ್ಥಿ, ಕೊಠಡಿಗಳು, ಮಕ್ಕಳು ಭರಿಸಿದ ಶುಲ್ಕದಿಂದಲೇ ನಿರ್ಮಿಸಲಾಗಿತ್ತು.
6) ಮೇಲೆ ಕಾಣಿಸಿದ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಯಾವ ತೆರನಾದ ಸಾಲವನ್ನು ಮಾಡದೆ 2018 ರ ಅಂತ್ಯದಲ್ಲಿ ಸುಮಾರು 20 ಲಕ್ಷ ಹಣವನ್ನು ಎಸಿ ಆಕೌಂಟ ನಲ್ಲಿ ಇರಿಸಲಾಯಿತು.
7) ಆದರೆ 2019 ರಿಂದ ತಾರಲ್ಲಿ ಇದ್ದಂತೆ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ
ಕಡಿಮೆಯಾಗಿದೆ. ಇದಲ್ಲದೇ ಕಮೀಷನ್ ಆಸೆಗೋಸ್ಕರ ಪದವಿ ಪೂರ್ವ ಕಾಲೇಜಿನ ಅನುಮತಿಗಳಿಲ್ಲದೆ ಸುಮಾರು 7 ಕೋಟಿ ಕಬ್ಬು ಬೆಳೆಗಾರರ ಪತ್ತಿನ ಸಂಘದಿಂದ ಸಾಲವನ್ನು ಪಡೆದು ಅನಗತ್ಯವಾಗಿ ಶಿಕ್ಷಣ ಸಂಸ್ಥೆಯನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. 8) ಕಬ್ಬು ಬೆಳೆಗಾರರ ಸಹಕಾರ ಪತ್ತಿನ ಸಂಘದಲ್ಲಿ ಆದಂತಹ ಅವ್ಯವಹಾರಗಳ ಮಾಹಿತಿ ಈ ಸಂಘವು ಸಾಮಾನ್ಯವಾಗಿ ಕಬ್ಬು ಬೆಳೆಗಾರರಿಗೆ ಅನುಕೂಲಗೋಸ್ಕರ 2 ಲಕ್ಷದವರೆಗೆ ರೈತರಿಗೆ
ಸಾಲ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ತಾವು ಅಧಿಕಾರಕ್ಕೆ ಬಂದ ನಂತರ ಬ್ಯಾಂಕಿನ ವ್ಯವಹಾರದಲ್ಲಿ ತಮ್ಮ ಅಧಿಕಾರ ಚಲಾಯಿತಿ ಬ್ಯಾಂಕಿನಲ್ಲಿ ಇರತಕ್ಕಂತಹ ಸುಮಾರು 20 ಲಕ್ಷದಷ್ಟು ಹಣವನ್ನು ಲೆಕ್ಕಕ್ಕೆ ತೋರಿಸದೇ ಬಳಸಿಕೊಂಡಿರುತ್ತೀರಿ, ಬ್ಯಾಂಕಿನ ವ್ಯವಹಾರ ದೃಷ್ಠಿಯಿಂದ ಒಬ್ಬ ಬೆಳೆಗಾರನಿಗೆ ಕನಿಷ್ಠ ಗರಿಷ್ಠ 2 ಲಕ್ಷ ರೂಪಾಯಿ ಸಾಲ ಪಡೆಯುವ ಸೌಲಭ್ಯ ಇದ್ದರೂ ಕೂಡಾ ತಮ್ಮ ಸಹೋದರಣ ಮಾಲೀಕತ್ವದ ಪೆಟ್ರೋಲ್ ಬಂಕಿಗೆ ಕಡಿಮೆ ಬಡ್ಡಿ ದರದಲ್ಲಿ 50 ಲಕ್ಷ ರೂಪಾಯಿ & ಇನ್ನೋರ್ವ ಸಹೋದರನ ಬೀಜ ಹಾಗೂ ಗೊಬ್ಬರದ ಮಾರಾಟ ಮಳಿಗೆಗೆ 25 ಲಕ್ಷ ಸಾಲವನ್ನು ಪಡೆದುಕೊಂಡಿದ್ದೀರಿ. ಹಣಕಾಸಿನ ಸಂಘದ ಕಾಯ್ದೆ ಪತ್ರಿಕೆ ಪಡೆದ ಸಾಲಿನ ಸುಮಾರು 10 ಪರ್ಸೆಂಟ್ ಶೇರು ಹಣವನ್ನು ಸುಮಾರು (7.50ಲಕ್ಷ ಮರು ಪಾವತಿಸದೇ ಕಾನೂನು ಬಾಹಿರವಾಗಿ ಸಾಲ ಪಡೆದಿದ್ದಾರೆ. ಈ ಆಪಾದನೆಗೆ ತಾವು ಆಗಿನ ಆಡಳಿತ ಮಂಡಳಿಯ ಮೇಲೆ ನಕಲು ದಾಖಲೆಯನ್ನು ಸ್ಪಷ್ಟನೆ ಕೋರಂ ಇಲ್ಲದ ಕಾನೂನು ಬಾಹಿರವಾಗಿ ಸಾಲ ಮಂಜೂರಾತಿ ಪಡೆದುಕೊಂಡು ಸಂಸ್ಥೆಗೆ ಹಾನಿ ಮಾಡಿದ್ದೀರಿ.
ಈ ರೀತಿಯಾಗಿ ಸ್ವಜನಪಕ್ಷಪಾತ ಕಾನೂನು ಬಾಹಿರವಾಗಿ ತಮ್ಮ ಎರಡು ಅವಧಿಯಲ್ಲಿ (2008- ರಿಂದ 2013/2018ರಿಂದ 2023) ಆಡಳಿತ ನಡೆಸಿ, ಕಾರ್ಖಾನೆಗೆ ಆರ್ಥಿಕವಾಗಿ ನಷ್ಟವನ್ನು ಮಾಡಿ ಸಾಲದ ಸುಳಿಗೆ ಸಿಲುಕಿಸಿದ್ದೀರಿ ಮತ್ತು ರೈತರಿಗೆ ಎಲ್ಲ ತೆರನಾದ ಕಷ್ಟವನ್ನು ಕೊಟ್ಟಿದ್ದೀರಿ. ಈ ಎಲ್ಲ ಮೇಲಿನ ಅಪಾದನೆಗಳ ಬಗ್ಗೆ ಚರ್ಚಿಸಲು ಒಂದೇ ವೇದಿಕೆಯಲ್ಲಿ ದಾಖಲೆ ಸಮೇತ ನಾವು ಸಿದ್ಧರಿದ್ದೇವೆ. ಈ ಸಂತ: ಆಹ್ವಾನಕ್ಕೆ ನೀವು ಸಿದ್ಧರಿದ್ದೀರಾ..? ಆದ್ದರಿಂದ ಎಲ್ಲಾ ಮತದಾರ ಬಾಂಧವರಿಗೆ ದೃಷ್ಟ ವ್ಯಕ್ತಿಗಳಿಗೆ ಮತ ಚಲಾಯಿಸದೇ ಕಾರ್ಖಾನೆ ‘ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ತಮ್ಮ ಹಿಂದಿನ ಆಡಳಿತ ಮತ್ತು ಪಾರದರ್ಶಕ ಆಡಳಿತ ನೀಡಿದಂತ ಕುಮಾರ ಚಂದ್ರಕಾಂತ ದೇಸಾಯಿ ತಂಡಕ್ಕೆ ತಮ್ಮ ಅತ್ಯ ಅಮೂಲ್ಯವಾದ ಮತವನ್ನು ಕೊಟ್ಟ ಪ್ರಚಂದ ಬಹುತದಿಂದ ಆರಿಸಿ ತರಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ. ಎಂದರು
ಈ ಸಂದರ್ಭದಲ್ಲಿ ಕುಮಾರ ಚಂದ್ರಕಾಂತ ದೇಸಾಯಿ ಹಾಗೂ ತಂಡದವರು ಉಪಸ್ತಿತರಿದ್ದರು..