ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಿಂದೆ ಲಿಂಗಾಯುತ ಸಮುದಾಯವಿಲ್ಲ. ಜತೆಗೆ, ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಮಾಜಕ್ಕೆ ಅವರ ಕೊಡುಗೆ ಏನು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರ ಭೂಹಗರಣ ದಾಖಲೆಯನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸಲಾಗುವುದು.ಇನ್ನೂ, ಅವರನ್ನು ನಂಬಿಕೊಂಡು ಯಾರೋ ಸಹ ಬಿಜೆಪಿ ಬಿಡುವುದಿಲ್ಲ.
ಅವರ ಹಿಂದೆ ಲಿಂಗಾಯುತ ಸಮುದಾಯವೇ ಇಲ್ಲ ಎಂದು ಟೀಕಿಸಿದರು.